ವೈಶಾಲಿ ಅಥವಾವೇಸಾಲಿ ಭಾರತದ ಇಂದಿನಬಿಹಾರ ರಾಜ್ಯದ ನಗರವಾಗಿತ್ತು. ಈಗ ಇದು ಪುರಾತತ್ವ ತಾಣವಾಗಿದೆ. ಇದು ತಿರ್ಹುತ್ ವಿಭಾಗದ ಭಾಗವಾಗಿದೆ.[೧]
ಇದು ಕ್ರಿ.ಪೂ ೬ ನೇ ಶತಮಾನದ ಸುಮಾರುಗಣರಾಜ್ಯದ ಮೊದಲ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟವಜ್ಜಿ ಮಹಾಜನಪದ (ವೃಜ್ಜಿಮಹಾಜನಪದ) ರಾಜಧಾನಿಯಾಗಿತ್ತು.ಗೌತಮ ಬುದ್ಧ ಕ್ರಿ.ಪೂ. ೪೮೩ರಲ್ಲಿ ತನ್ನ ಮರಣದ ಮೊದಲು ತನ್ನ ಕೊನೆಯ ಧರ್ಮೋಪದೇಶವನ್ನು ಇಲ್ಲಿ ನೀಡಿದ. ನಂತರ ಕ್ರಿ.ಪೂ. ೩೮೩ರಲ್ಲಿ ಎರಡನೇ ಬೌದ್ಧ ಪರಿಷತ್ತನ್ನು ಕಾಲಸೋಕ ರಾಜನು ಇಲ್ಲಿ ನಡೆಸಿದನು. ಹಾಗಾಗಿ ಇದುಜೈನ ಮತ್ತುಬೌದ್ಧ ಧರ್ಮ ಎರಡರಲ್ಲೂ ಪ್ರಮುಖ ಸ್ಥಾನವಾಗಿದೆ.[೨][೩][೪] ಇದು ಅತ್ಯುತ್ತಮವಾಗಿ ಸಂರಕ್ಷಿತವಾಗಿರುವ ಒಂದು ಅಶೋಕ ಸ್ತಂಭವನ್ನು ಹೊಂದಿದೆ. ಸ್ತಂಭದ ತುದಿಯಲ್ಲಿ ಒಂದು ಸಿಂಹವಿದೆ (26°00′51″N85°06′33″E / 26.014162°N 85.109220°E /26.014162; 85.109220 ) .
ವೈಶಾಲಿಯಲ್ಲಿ ಸ್ತೂಪಅಭಿಷೇಕ್ ಪುಷ್ಕರಿಣಿ, ಪಟ್ಟಾಭಿಷೇಕದ ತೊಟ್ಟಿ, ಬುದ್ಧನ ಅವಶೇಷ ಸ್ತೂಪ, ವೈಶಾಲಿ ಬಳಿ ಇದೆ.