ಭೂಕಂಪ (ಇದಕ್ಕೆಭೂಮಿಯ ಅದಿರಾಟ ಅಥವಾಹೊಯ್ದಾಡುವಿಕೆ ಎಂದೂ ಹೆಸರಿದೆ) ಎಂಬುದುಭೂಮಿಯಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನುಭೂಕಂಪಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ (ಸೈಸ್ಮಗ್ರಾಫ್) ಎಂಬ ಹೆಸರೂ ಇದೆ.ಭೂಕಂಪವೊಂದರಕ್ಷಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತೇಕ ಬಳಕೆಯಲ್ಲಿಲ್ಲದ ೩ರಷ್ಟು ಪ್ರಮಾಣದೊಂದಿಗಿನರಿಕ್ಟರ‍್ ಪ್ರಮಾಣವನ್ನು, ಅಥವಾ ಬಹುತೇಕಗ್ರಹಿಸಲು ಅಸಾಧ್ಯವಾದ ಕೆಳಮಟ್ಟದ ಭೂಕಂಪಗಳನ್ನು ಮತ್ತು ವಿಶಾಲವ್ಯಾಪ್ತಿಯಲ್ಲಿ ಗಂಭೀರ ಸ್ವರೂಪದ ಹಾನಿಯನ್ನುಂಟುಮಾಡುವ ೭ರಷ್ಟು ಪ್ರಮಾಣದ ಭೂಕಂಪವನ್ನು ಪ್ರಚಲಿತ ವಿಧಾನದಂತೆ ಅಥವಾ ರೂಢಿಯಂತೆ ದಾಖಲಿಸಲಾಗುತ್ತದೆ.ಮಾರ್ಪಡಿಸಲಾಗಿರುವಮೆರ್ಕ್ಯಾಲಿ ಮಾಪಕದಲ್ಲಿ ಅಲುಗಾಟದ ತೀವ್ರತೆಯನ್ನು ಅಳೆಯಲಾಗುತ್ತದೆ. ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು ಉಂಟುಮಾಡುವ ಹಾಗೂ ಕೆಲವೊಮ್ಮೆ ನೆಲವನ್ನು ಸ್ಥಾನಪಲ್ಲಟಗೊಳಿಸುವ ಮೂಲಕ ಭೂಕಂಪಗಳು ಸ್ವತಃ ಸ್ಪಷ್ಟವಾಗಿ ಗೋಚರಿಸುತ್ತವೆ. ಕಡಲತೀರದಾಚೆಗೆ ಭೂಕಂಪದ ಒಂದು ದೊಡ್ಡಅಧಿಕೇಂದ್ರವು ಸ್ಥಿತವಾಗಿದ್ದಾಗ, ಕೆಲವೊಮ್ಮೆ ಸಾಕಷ್ಟು ಸ್ಥಾನಪಲ್ಲಟಕ್ಕೆ ಈಡಾಗುವ ಸಮುದ್ರತಳದ ಭೂಮಿಯುಸುನಾಮಿಯೊಂದನ್ನು ಉಂಟುಮಾಡುತ್ತದೆ.ಭೂಕಂಪಗಳ ಸಮಯದಲ್ಲಿ ಕಂಡುಬರುವ ಅಲುಗಾಟಗಳು, ಭೂಕುಸಿತಗಳನ್ನು ಹಾಗೂ ಕೆಲವೊಮ್ಮೆ ಜ್ವಾಲಾಮುಖಿಯಂತಹ ಚಟುವಟಿಕೆಯನ್ನೂ ಪ್ರಚೋದಿಸಬಲ್ಲವು. ಅದರದೇ ಆದ ಅತ್ಯಂತ ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ, ಭೂಕಂಪದ ಅಲೆಗಳನ್ನು ಹುಟ್ಟುಹಾಕುವ- ಅದು ಒಂದು ನೈಸರ್ಗಿಕವಿದ್ಯಮಾನವಿರಬಹುದು ಅಥವಾ ಮನುಷ್ಯರಿಂದ ಉಂಟಾದ ಒಂದು ಘಟನೆಯೇ ಆಗಿರಬಹುದು- ಯಾವುದೇ ಭೂಕಂಪ ಘಟನೆಯನ್ನು ವಿವರಿಸಲುಭೂಕಂಪ ಎಂಬ ಪದವನ್ನು ಬಳಸಲಾಗುತ್ತದೆ. ಭೂಕಂಪಗಳು ಬಹುತೇಕವಾಗಿ ಭೂವೈಜ್ಞಾನಿಕದೋಷಗಳ (ಭೂಸ್ತರದ ಅಖಂಡತೆಗೆ ಉಂಟಾಗಿರುವ ಊನ) ಛಿದ್ರವಾಗುವಿಕೆಯಿಂದಾಗಿ ಉಂಟಾಗುತ್ತವೆಯಾದರೂ, ಜ್ವಾಲಾಮುಖಿಯ ಚಟುವಟಿಕೆ, ಭೂಕುಸಿತಗಳು, ಗಣಿಯಲ್ಲಿನ ಸ್ಫೋಟಗಳು ಹಾಗೂ ಪರಮಾಣು ಪರೀಕ್ಷಾ ಪ್ರಯೋಗಗಳಿಂದಲೂ ಅವು ಸಂಭವಿಸಲು ಸಾಧ್ಯವಿದೆ. ಭೂಕಂಪವೊಂದರ ಆರಂಭಿಕ ಛಿದ್ರವಾಗುವಿಕೆಯ ಬಿಂದುವನ್ನು ಅದರಕೇಂದ್ರಸ್ಥಾನ ಅಥವಾಅಡಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಅಡಿಯ ಕೇಂದ್ರಕ್ಕೆ ನೇರವಾಗಿ ಮೇಲ್ಭಾಗದಲ್ಲಿರುವ, ನೆಲದ ಮಟ್ಟದಲ್ಲಿನ ಬಿಂದುವನ್ನುಅಧಿಕೇಂದ್ರ ಎಂದು ಕರೆಯಲಾಗುತ್ತದೆ.
ಜಾಗತಿಕ ಭೂಕಂಪ ಅಧಿಕೇಂದ್ರಗಳು, 1963–1998ಜಾಗತಿಕ ಪದರದ ರಾಚನಿಕ ವ್ಯತ್ಯಾಸಗಳ ಚಲನೆ
ರಚನಿಕ ವ್ಯತ್ಯಾಸಗಳ ಭೂಕಂಪಗಳು ಭೂಮಿಯ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಸಂಭವಿಸುತ್ತವೆ. ಅಂದರೆ,ದೋಷದ ಸಮತಲದಾದ್ಯಂತ ಬಿರುಕಿನ ವಿಸ್ತರಣೆಯನ್ನು ದೂಡುವ ಸ್ಥಿತಿಸ್ಥಾಪಕ ಎಳೆತ ಅಥವಾ ಪೀಡನ ಶಕ್ತಿಯು ಭೂಮಿಯ ಯಾವಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶೇಖರಣೆಗೊಂಡಿದೆಯೋ ಅಲ್ಲಿ ಅವು ಸಂಭವಿಸುತ್ತವೆ. ಭೂಮಿಯ ಮೇಲೆ ಅತಿದೊಡ್ಡ ದೋಷದ ಮೇಲ್ಮೈಗಳನ್ನು ರೂಪಿಸುವ,ರೂಪಾಂತರದ ಅಥವಾಒಮ್ಮುಖವಾಗಿರುವ ಮಾದರಿಯ ಪದರದ ಗಡಿಯ ಸಂದರ್ಭದಲ್ಲಿ ಅವು ಪರಸ್ಪರ ಮೃದುವಾಗಿಭೂಕಂಪವುಂಟುಮಾಡದೆಯೇ ಹಾದುಹೋಗುತ್ತವೆ. ಘರ್ಷಣೆಯ ಪ್ರತಿರೋಧಕತೆಯನ್ನು ಹೆಚ್ಚಿಸುವ ಯಾವುದೇ ಏರುಪೇರುಗಳು ಅಥವಾತರಕಲುಗಳು ಗಡಿಯಾದ್ಯಂತ ಇಲ್ಲದಿದ್ದಲ್ಲಿ ಮಾತ್ರ ಇದು ಸಾಧ್ಯ. ಬಹುತೇಕ ಗಡಿಗಳು ಇಂತಹ ತರಕಲುಗಳನ್ನು ಹೊಂದಿರುತ್ತವೆಯಾದ್ದರಿಂದ ಅದು ಒಂದು ರೀತಿಯಅಂಟುವ-ಜಾರುವ ವರ್ತನೆಯನ್ನು ಉಂಟುಮಾಡುತ್ತದೆ. ಗಡಿಯು ಒಮ್ಮೆ ಬಂಧಿಸಿದರೆ, ಪದರಗಳ ನಡುವಿನ ಸಾಪೇಕ್ಷ ಚಲನೆಯು ಮುಂದುವರಿದು ಒತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ದೋಷದ ಮೇಲ್ಮೈನ ಸುತ್ತಮುತ್ತಲಿನ ಪ್ರದೇಶದಲ್ಲಿ ಶೇಖರಗೊಂಡಿರುವ ಎಳೆತದ ಶಕ್ತಿಯು ಹೆಚ್ಚುತ್ತದೆ. ತರಕಲುಗಳನ್ನು ಭೇದಿಸಿಕೊಂಡು ಹೋಗಲು ಸಾಕಾಗುವಷ್ಟರ ಮಟ್ಟಿಗೆ ಒತ್ತಡವು ಏರುವವರೆಗೂ ಇದು ಮುಂದುವರಿಯುತ್ತದೆ. ಹೀಗಾಗಿ ದೋಷದ ಬಂಧಿತ ಭಾಗದ ಮೇಲೆ ಜಾರಿಕೊಳ್ಳಲು ಹಠಾತ್ತನೆ ಅವಕಾಶ ಕಲ್ಪಿಸುವುದರ ಮೂಲಕಶೇಖರಗೊಂಡ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.ಹೊರಹೊಮ್ಮಿದ ಸ್ಥಿತಿಸ್ಥಾಪಕಎಳೆತದಭೂಕಂಪದ ಅಲೆಗಳು, ದೋಷಯುಕ್ತ ಮೇಲ್ಮೈಯ ತಿಕ್ಕಾಟದ ಬಿಸಿಯೇರುವಿಕೆ ಮತ್ತು ಬಂಡೆಗಳ ಒಡೆಯುವಿಕೆಯ ಒಂದು ಸಂಯೋಜಿತ ಸ್ಥಿತಿಯಂತೆ ಈ ಶಕ್ತಿಯು ಬಿಡುಗಡೆಯಾಗುತ್ತದೆ. ಇದರಿಂದಾಗಿ ಭೂಕಂಪವು ಸಂಭವಿಸುತ್ತದೆ.ಸಾಂದರ್ಭಿಕ ಹಠಾತ್ ಭೂಕಂಪದ ವಿಫಲತೆಯಿಂದ ಮಧ್ಯೆ ಮಧ್ಯೆ ತಡೆಗಟ್ಟಲ್ಪಟ್ಟ ಎಳೆತ ಮತ್ತು ಒತ್ತಡದ ಅನುಕ್ರಮ ಸಂಚಯ ಅಥವಾ ಹೆಚ್ಚಾಗುವಿಕೆಯ ಪ್ರಕ್ರಿಯೆಯನ್ನುಸ್ಥಿತಿಸ್ಥಾಪಕ-ಚೇತರಿಕೆಯ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಭೂಕಂಪವೊಂದರ ಒಟ್ಟು ಶಕ್ತಿಯ ಕೇವಲ ಶೇಕಡ ೧೦ ಭಾಗ ಅಥವಾ ಅದಕ್ಕಿಂತ ಕಡಿಮೆ ಭಾಗವು ಭೂಕಂಪದ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ಅಂದಾಜಿಸಲಾಗಿದೆ. ಭೂಕಂಪದ ಶಕ್ತಿಯ ಬಹುಪಾಲು ಭಾಗವು ಭೂಕಂಪದಬಿರುಕಿನ ಬೆಳವಣಿಗೆಗೆ ಶಕ್ತಿ ನೀಡಲು ಬಳಕೆಯಾಗುತ್ತದೆ ಅಥವಾ ತಿಕ್ಕಾಟದಿಂದ ಹುಟ್ಟಿಕೊಂಡ ಶಾಖವಾಗಿ ಅದು ಪರಿವರ್ತನೆಯಾಗುತ್ತದೆ. ಆದ್ದರಿಂದ, ಭೂಮಿಯ ಲಭ್ಯವಿರುವಸ್ಥಿತಿಸ್ಥಾಪಕ ವಿಭವಶಕ್ತಿಯನ್ನು ಭೂಕಂಪಗಳು ಕುಗ್ಗಿಸುತ್ತವೆ ಮತ್ತು ಅದರ ಉಷ್ಣತೆಯನ್ನು ಹೆಚ್ಚಿಸುತ್ತವೆ. ಭೂಮಿಯ ಆಳದ ಒಳಭಾಗದಿಂದ ಬಂದ ಶಾಖದ ವಹನೀಯ ಮತ್ತು ಸಂವಾಹಕ ಹರಿವಿಗೆ ಹೋಲಿಸಿದರೆ ಈ ಬದಲಾವಣೆಗಳು ತೀರಾ ಅಲ್ಪ ಪ್ರಮಾಣದವು ಎಂದು ಹೇಳಬಹುದು.[೧]
ಭೂಕಂಪವನ್ನು ಉಂಟುಮಾಡಬಹುದಾದ ಮುಖ್ಯ ದೋಷಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ, ಸಾಮಾನ್ಯ, ಹಿಮ್ಮುಖ (ನೂಕುವಿಕೆ) ಮತ್ತು ಹೊಡೆಯುವ-ಜಾರುವ ವಿಧಗಳು.ಸಾಮಾನ್ಯ ಮತ್ತು ಹಿಮ್ಮುಖ ದೋಷಗಾರಿಕೆಗಳುಇಳುಕಲು-ಜಾರಿಕೆಯ ಉದಾಹರಣೆಯಾಗಿದ್ದು, ದೋಷದಾದ್ಯಂತದ ಜರುಗುವಿಕೆಯು ಇಳುಕಲಿನ ದಿಕ್ಕಿನಲ್ಲಿ ಇರುತ್ತದೆ ಮತ್ತು ಅವುಗಳ ಮೇಲಿನ ಚಲನೆಯು ಒಂದು ಲಂಬ ಘಟಕವನ್ನು ಒಳಗೊಂಡಿರುತ್ತದೆ.ಬೇರೆದಿಕ್ಕಿಗೆ ತಿರುಗುವ ಗಡಿಯೊಂದರಂತೆ ಹೊರಪದರವುವಿಸ್ತರಿಸಲ್ಪಟ್ಟಿರುವ ಅಥವಾ ಚಾಚಿರುವ ಪ್ರದೇಶಗಳಲ್ಲಿ ಸಾಮಾನ್ಯ ದೋಷಗಳು ಮುಖ್ಯವಾಗಿ ಸಂಭವಿಸುತ್ತವೆ. ಒಮ್ಮುಖವಾಗಿರುವ ಗಡಿಯೊಂದರಲ್ಲಿ ಇರುವಂತೆ ಹೊರಪದರವುಮೊಟುಕಾಗಿರುವ ಪ್ರದೇಶಗಳಲ್ಲಿ ಹಿಮ್ಮುಖ ದೋಷಗಳು ಸಂಭವಿಸುತ್ತವೆ. ಹೊಡೆಯುವ-ಜಾರುವ ದೋಷಗಳು ಕಡಿದಾದ ರಚನೆಗಳಾಗಿದ್ದು, ದೋಷದ ಎರಡು ಭಾಗಗಳು ಪರಸ್ಪರ ಅಡ್ಡಡ್ಡಲಾಗಿ ಅಥವಾ ಸಮತಲದಲ್ಲಿ ಒಂದರ ಪಕ್ಕ ಒಂದು ಹಾದುಹೋಗುವಂತೆ ಇರುತ್ತವೆ. ರೂಪಾಂತರ ಸ್ವರೂಪದ ಗಡಿಗಳು ಹೊಡೆಯುವ-ಜಾರುವ ದೋಷದ ಒಂದು ನಿರ್ದಿಷ್ಟ ವಿಧವಾಗಿದೆ. ಅನೇಕ ಭೂಕಂಪಗಳು ದೋಷಗಳ ಮೇಲಿನ ಚಲನೆಯಿಂದಾಗಿ ಸಂಭವಿಸುತ್ತವೆ. ಈ ಚಲನೆಗಳು ಇಳುಕಲು-ಜಾರಿಕೆ ಮತ್ತು ಹೊಡೆಯುವ-ಜಾರಿಕೆಗಳೆರಡರ ಘಟಕಗಳನ್ನು ಹೊಂದಿರುತ್ತವೆ. ಇದಕ್ಕೆ ವಾಲಿದ ಅಥವಾ ಓರೆಯಾದ ಜಾರಿಕೆ ಎಂದು ಹೆಸರು.
ಭೂಖಂಡದ ಭೂಮಂಡಲದೊಳಗೆ ಪದರದ ಗಡಿಗಳು ಕಂಡುಬರುವ ಭಾಗದಲ್ಲಿ, ಸ್ವತಃ ಪದರದ ಗಡಿಗಿಂತ ಹೆಚ್ಚು ವಿಸ್ತಾರವಾದ ಪ್ರದೇಶಕ್ಕೆ ವಿರೂಪತೆ ಅಥವಾ ಆಕಾರದ ಬದಲಾವಣೆಯು ಹಬ್ಬುತ್ತದೆ.ಸ್ಯಾನ್ ಆಂಡ್ರಿಯಾಸ್ ದೋಷದ ಭೂಖಂಡದ ರೂಪಾಂತರದಲ್ಲಿ ಅನೇಕ ಭೂಕಂಪಗಳು ಪದರದ ಗಡಿಗಿಂತ ದೂರದಲ್ಲಿ ಸಂಭವಿಸುತ್ತವೆ. ದೋಷದ ಜಾಡಿನಲ್ಲಿನ (ಉದಾಹರಣೆಗೆ "ದೊಡ್ಡ-ಬಾಗುವಿಕೆಯ" ಪ್ರದೇಶ) ಪ್ರಮುಖ ಅವ್ಯವಸ್ಥೆಗಳಿಂದ ಉಂಟಾದ ವಿರೂಪತೆಯ ವಿಶಾಲ ವಲಯದೊಳಗೆ ರೂಪುಗೊಂಡಿರುವ ಎಳೆತಕ್ಕೆ ಇವು ಸಂಬಂಧಪಟ್ಟಿರುತ್ತವೆ.ನಾರ್ತ್‌ರಿಡ್ಜ್ ಭೂಕಂಪವು ಇಂಥಾ ಒಂದು ವಲಯದೊಳಗಿನ, ಉದ್ದೇಶರಹಿತ ನೂಕುವಿಕೆಯ ಮೇಲಿನ ಚಲನೆಯೊಂದಿಗೆ ಸಂಬಂಧಹೊಂದಿತ್ತು.ಅರೇಬಿಯಾದ ಮತ್ತುಯುರೇಷಿಯಾದ ಪದರಗಳ ನಡುವಿನ, ಬಲವಾಗಿ ವಾಲಿರುವ ಒಮ್ಮುಖ ಪದರದ ಗಡಿಯು ಇದಕ್ಕಿರುವ ಮತ್ತೊಂದು ಉದಾಹರಣೆ ಎನ್ನಬಹುದು. ಇಲ್ಲಿ ಇದುಝಾಗ್ರೋಸ್ ಪರ್ವತಗಳ ವಾಯವ್ಯ ಭಾಗದ ಮೂಲಕ ಓಡುತ್ತದೆ.ಈ ಪದರದ ಗಡಿಯೊಂದಿಗೆ ಸಂಬಂಧ ಹೊಂದಿರುವ ವಿರೂಪತೆಯು ಎರಡು ಭಾಗಗಳಾಗಿ ವಿಭಜಿಸಲ್ಪಡುತ್ತದೆ. ನೈರುತ್ಯ ಭಾಗದಲ್ಲಿನ ವಿಸ್ತೃತ ವಲಯವೊಂದರ ಗಡಿಗೆ ಲಂಬವಾಗಿರುವ, ಹೆಚ್ಚೂ ಕಮ್ಮಿ ಅಪ್ಪಟ ನೂಕುವಿಕೆಯ ಉದ್ದೇಶದ ಚಲನೆಗಳದ್ದು ಒಂದು ಭಾಗ. ಸ್ವತಃ ವಾಸ್ತವಿಕ ಪದರದ ಗಡಿಗೆ ಸನಿಹದಲ್ಲಿರುವ ಇತ್ತೀಚಿನ ಮುಖ್ಯ ದೋಷದಾದ್ಯಂತದ, ಹೆಚ್ಚೂ ಕಮ್ಮಿ ಅಪ್ಪಟ ಹೊಡೆಯುವ-ಜಾರಿಕೆಯ ಚಲನೆಯದ್ದು ಮತ್ತೊಂದು ಭಾಗ.ಭೂಕಂಪಕೇಂದ್ರಿತ ವಿನ್ಯಾಸಗಳಿಂದ ಇದನ್ನು ನಿರೂಪಿಸಲಾಗುತ್ತದೆ.[೨]ಎಲ್ಲಾ ರಾಚನಿಕ ವ್ಯತ್ಯಾಸಗಳ ಭೂಕವಚದ ಪದರಗಳು ತಮ್ಮ ನೆರೆಹೊರೆಯ ಪದರಗಳೊಂದಿಗೆ ಮತ್ತು ಸಂಚಿತ ಹೇರಿಕೆ ಅಥವಾ ಇಳಿಸುವಿಕೆಯೊಂದಿಗೆ (ಉದಾಹರಣೆ: ಹಿಮನದಿ ಅಳಿವು) ತಾವು ಮಾಡಿಕೊಂಡ ಪಾರಸ್ಪರಿಕ ಕ್ರಿಯೆಗಳ ಕಾರಣದಿಂದ ಉಂಟಾದ ಆಂತರಿಕ ಒತ್ತಡದ ಪ್ರದೇಶಗಳನ್ನು ಹೊಂದಿರುತ್ತವೆ. ಈಗಾಗಲೇ ಅಸ್ತಿತ್ವದಲ್ಲಿರುವ ದೋಷದ ಪದರಗಳಾದ್ಯಂತ ವಿಫಲತೆಯನ್ನು ಉಂಟುಮಾಡಲು ಈ ಒತ್ತಡಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಅವುಅಂತರ ಭೂಕವಚ ಭೂಕಂಪಗಳನ್ನು ರೂಪಿಸುತ್ತವೆ.
ರಾಚನಿಕ ವ್ಯತ್ಯಾಸಗಳ ಭೂಕಂಪಗಳ ಪೈಕಿ ಬಹುಪಾಲು ಭೂಕಂಪಗಳು ಹಲವು ಹತ್ತು ಕಿಲೋಮೀಟರುಗಳನ್ನು ಮೀರದಂತಿರುವ ಆಳದಲ್ಲಿನ ಬೆಂಕಿಯ ಉಂಗುರದಲ್ಲಿ ಹುಟ್ಟಿಕೊಳ್ಳುತ್ತವೆ. ೭೦ ಕಿಮೀಗೂ ಕಡಿಮೆಯಿರುವ ಆಳದಲ್ಲಿ ಸಂಭವಿಸುವ ಭೂಕಂಪಗಳನ್ನು ’ಮೇಲ್ಮೈ-ಕೇಂದ್ರಿತ’ ಭೂಕಂಪಗಳೆಂದು ವರ್ಗೀಕರಿಸಲಾಗಿದ್ದರೆ, ೭೦ ರಿಂದ ೩೦೦ ಕಿಮೀ ಆಳದ ನಡುವೆ ಇರುವ ಕೇಂದ್ರಿತ-ಆಳದೊಂದಿಗಿನ ಭೂಕಂಪವೊಂದನ್ನು ’ಮಧ್ಯ-ಕೇಂದ್ರಿತ’ ಅಥವಾ ’ಮಧ್ಯಂತರ-ಆಳದ’ ಭೂಕಂಪಗಳೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಮತ್ತೊಂದು ರಾಚನಿಕ ವ್ಯತ್ಯಾಸಗಳ ಭೂಕವಚದ ಪದರದ ಅಡಿಯಲ್ಲಿನ, ಹಳೆಯ ಮತ್ತು ಶೀತಲಕರಸಾಗರದ ಹೊರಪದರವು ಇಳಿಯುವ ಪ್ರದೇಶವಾದಉಪವಾಹಿ ವಲಯಗಳಲ್ಲಿಆಳ-ಕೇಂದ್ರಿತ ಭೂಕಂಪಗಳು ಅತಿ ಹೆಚ್ಚಿನ ಆಳದಲ್ಲಿ (೩೦೦ ಕಿಮೀನಿಂದ ೭೦೦ ಕಿಲೋಮೀಟರ್‌ಗಳವರೆಗೆ) ಸಂಭವಿಸಬಹುದಾಗಿದೆ.[೩] ಭೂಕಂಪಶೀಲ ಚಟುವಟಿಕೆಯ ಇಂತಹ ಉಪವಾಹಿ ಪ್ರದೇಶಗಳನ್ನುವಡಾಟಿ-ಬೆನಿಯಾಫ್ ವಲಯಗಳು ಎಂದು ಕರೆಯಲಾಗುತ್ತದೆ. ಅತಿ ಹೆಚ್ಚಿನ ಉಷ್ಣತೆ ಮತ್ತು ಒತ್ತಡದ ಕಾರಣದಿಂದಾಗಿ ಉಪವಾಹಿತಭೂಮಂಡಲವು ಇನ್ನು ಮುಂದೆ ಕಠಿಣವಾಗಿರಲು ಸಾಧ್ಯವಿಲ್ಲದ ಆಳದಲ್ಲಿ ಆಳ-ಕೇಂದ್ರಿತ ಭೂಕಂಪಗಳು ಸಂಭವಿಸುತ್ತವೆ.ಆಲಿವೀನ್ ಖನಿಜವುಸ್ಪಿನೆಲ್ ಖನಿಜದ ಸ್ವರೂಪ ಅಥವಾ ರಚನೆಗೆ ತನ್ನಅವಸ್ಥೆಯ ಬದಲಾವಣೆ ಮಾಡಿಕೊಳ್ಳುವುದರಿಂದ ಉಂಟಾಗುವ ದೋಷವ್ಯವಸ್ಥೆಯು, ಆಳ-ಕೇಂದ್ರಿತ ಭೂಕಂಪಗಳ ಹುಟ್ಟುವಿಕೆಯ ಒಂದು ಸಂಭವನೀಯ ವಿನ್ಯಾಸವಾಗಿದೆ.[೪]
ಅಗ್ನಿಪರ್ವತದ ಅಥವಾ ಜ್ವಾಲಾಮುಖೀಯ ವಲಯಗಳಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ.ಅಗ್ನಿಪರ್ವತಗಳಲ್ಲಿನಶಿಲಾರಸದ ಚಲನೆ ಹಾಗೂರಾಚನಿಕ ವ್ಯತ್ಯಾಸದ ದೋಷಗಳೆರಡರಿಂದಲೂ ಭೂಕಂಪಗಳು ಅಲ್ಲಿ ಸಂಭವಿಸುತ್ತವೆ. ಇಂಥಾ ಭೂಕಂಪಗಳು ಜ್ವಾಲಾಮುಖೀಯ ವಿಸ್ಫೋಟ ಅಥವಾ ಉಗುಳುವಿಕೆಯ ಸನ್ನಿವೇಶಗಳಿಗೆ ಮುನ್ನೆಚ್ಚರಿಕೆಗಳಾಗಿರುತ್ತವೆ.ಸೇಂಟ್ ಹೆಲೆನ್ಸ್ ಪರ್ವತದ,1980ರಲ್ಲಿನ ವಿಸ್ಫೋಟಗಳು ಇದಕ್ಕೊಂದು ನಿದರ್ಶನ.[೫]ದೊಡ್ಡ ಪ್ರಮಾಣದಲ್ಲಿ ಚಲಿಸುತ್ತಿರುವ ಭೂಕಂಪದ ರಾಶಿಕಣಗಳು, ಅಗ್ನಿಪರ್ವತಗಳಾದ್ಯಂತ ಇರುವ ಶಿಲಾರಸದ ಹರಿಯುವಿಕೆಯ ನಿರ್ದಿಷ್ಟ ತಾಣಗಳನ್ನು ಸೂಚಿಸುತ್ತವೆ. ಸಂಯುಕ್ತ ಸಂಸ್ಥಾನಗಳಲ್ಲಿ ಭೂಕಂಪಮಾಪಕಗಳು ಹಾಗೂ ಟಿಲ್ಟಿಮೀಟರ್‌ಗಳ (ನೆಲದ ಇಳಿಜಾರು ಪ್ರಮಾಣವನ್ನು ಅಳೆಯುವ ಒಂದು ಉಪಕರಣ) ಸಹಾಯದಿಂದ ಇವುಗಳನ್ನು ಅಂದು ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಸನ್ನಿಹಿತವಾಗಿರುವ ಅಥವಾ ಸಂಭವಿಸಲಿರುವ ವಿಸ್ಫೋಟ ಅಥವಾ ಉಗುಳುವಿಕೆಗಳನ್ನು ಮುಂಚಿತವಾಗಿಯೇ ಊಹಿಸಲು ಇವುಗಳನ್ನು ಸಂವೇದಕಗಳಂತೆ ಬಳಸಲಾಗುತ್ತದೆ.[೬]
ಬಹುತೇಕ ಭೂಕಂಪಗಳು ಸರಣಿಯೊಂದರ ಭಾಗವಾಗಿದ್ದು, ನಿರ್ದಿಷ್ಟ ತಾಣ ಮತ್ತು ಸಮಯಕ್ಕೆ ಸಂಬಂಧಿಸಿ ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ.[೭] ಬಹುತೇಕ ಭೂಕಂಪ ಗುಚ್ಛಗಳು ಸಣ್ಣ ಕಂಪನಗಳನ್ನು ಒಳಗೊಂಡಿದ್ದು, ಅವು ಕೇವಲ ಅಲ್ಪ ಪ್ರಮಾಣದ ಹಾನಿಯನ್ನುಂಟುಮಾಡುತ್ತವೆ ಅಥವಾ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಆದರೆ, ಭೂಕಂಪಗಳು ತಮಗೆ ತಾವೇ ಮರುಕಳಿಸುತ್ತವೆ ಎಂಬ ಒಂದು ವಾದ ಅಥವಾ ಸಿದ್ಧಾಂತವೂ ಚಾಲ್ತಿಯಲ್ಲಿದೆ.[೮]
ಹಿಂದಿನ ಭೂಕಂಪದ ಅಥವಾ ಪ್ರಮುಖ ಆಘಾತ ಎಂದು ಕರೆಯಲಾಗುವ ಭೂಕಂಪದ ನಂತರ ಸಂಭವಿಸುವ ಭೂಕಂಪಕ್ಕೆ ಉತ್ತರಾಘಾತ ಎಂದು ಹೆಸರು.ಪ್ರಮುಖ ಆಘಾತವು ಸಂಭವಿಸಿದ ಅದೇ ವಲಯದಲ್ಲಿಯೇ ಉತ್ತರಾಘಾತವು ಇರುತ್ತದೆಯಾದರೂ ಅದು ಸಣ್ಣ ಪ್ರಮಾಣದಲ್ಲಿರುತ್ತದೆ ಎಂಬುದು ಗಮನಾರ್ಹ.ಒಂದು ವೇಳೆ ಪ್ರಮುಖ ಆಘಾತಕ್ಕಿಂತ ಉತ್ತರಾಘಾತದ ಪ್ರಮಾಣವು ದೊಡ್ಡದಾಗಿದ್ದರೆ, ಉತ್ತರಾಘಾತವನ್ನು ಪ್ರಮುಖ ಆಘಾತ ಎಂದು ಮರುಸೂಚಿಸಲಾಗುತ್ತದೆ ಅಥವಾ ಹೆಸರಿಸಲಾಗುತ್ತದೆ. ಅಷ್ಟೇ ಅಲ್ಲ, ಮೂಲತಃ ಪ್ರಮುಖ ಆಘಾತವೆಂದು ಕರೆಸಿಕೊಂಡಿದ್ದನ್ನುಪೂರ್ವಾಘಾತ ಎಂದು ಮರುಹೆಸರಿಸಲಾಗುತ್ತದೆ. ಸ್ಥಾನಪಲ್ಲಟಗೊಂಡದೋಷದ ಸಮತಲದ ಸುತ್ತಲಿನ ಹೊರಪದರವು ಪ್ರಮುಖ ಆಘಾತದ ಪರಿಣಾಮಗಳಿಗೆ ಹೊಂದಿಕೊಂಡಂತೆ ಉತ್ತರಾಘಾತಗಳು ರೂಪುಗೊಳ್ಳುತ್ತವೆ.[೭]
ಭೂಕಂಪ ರಾಶಿಕಣಗಳು ಭೂಕಂಪಗಳ ಸರಣಿಗಳಾಗಿದ್ದು, ಅಲ್ಪಾವಧಿಯ ಕಾಲದೊಳಗಾಗಿ ನಿರ್ದಿಷ್ಟವಾದ ಪ್ರದೇಶದಲ್ಲಿ ಅಪ್ಪಳಿಸುತ್ತವೆ.ಉತ್ತರಾಘಾತಗಳ ಸರಣಿಯನ್ನು ಅನುಸರಿಸಿ ಬರುವ ಭೂಕಂಪಗಳಿಗಿಂತ ಅವು ವಿಭಿನ್ನವಾಗಿರುತ್ತವೆ. ಆ ಸರಣಿಯಲ್ಲಿನ ಒಂದೇ ಒಂದು ಭೂಕಂಪವೂ ನಿಸ್ಸಂಶಯವಾಗಿ ಪ್ರಮುಖ ಆಘಾತವಾಗಿರದಿರುವುದು ಇಲ್ಲಿನ ವೈಶಿಷ್ಟ್ಯ. ಆದ್ದರಿಂದ ಅವುಗಳಲ್ಲಿ ಯಾವುದೂ ಕೂಡ ಮತ್ತೊಂದಕ್ಕಿಂತ ಗಮನಾರ್ಹವಾದ ಹೆಚ್ಚಿನ ಪ್ರಮಾಣಗಳನ್ನು ಹೊಂದಿರುವುದಿಲ್ಲ.ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ೨೦೦೪ರಲ್ಲಿ ಕಂಡುಬಂದ ಚಟುವಟಿಕೆಯು ಭೂಕಂಪ ರಾಶಿಕಣಕ್ಕೆ ಒಂದು ಉದಾಹರಣೆಯಾಗಿದೆ.[೯]
ಕೆಲವೊಮ್ಮೆಭೂಕಂಪದ ಬಿರುಗಾಳಿಯ ರೀತಿಯಲ್ಲಿ ಭೂಕಂಪಗಳ ಸರಣಿಯೇ ಸಂಭವಿಸುತ್ತದೆ. ಭೂಕಂಪಗಳು ಗುಚ್ಛಗಳಲ್ಲಿ ಬಂದು ದೋಷವೊಂದನ್ನು ಅಪ್ಪಳಿಸುವುದು ಇಲ್ಲಿನ ವೈಶಿಷ್ಟ್ಯವಾಗಿದ್ದು, ಅವುಗಳಲ್ಲಿನ ಪ್ರತಿಯೊಂದೂ ಸಹ ಹಿಂದಿನ ಭೂಕಂಪಗಳ ಅಲುಗಾಟದ ಅಥವಾ ಒತ್ತಡದ ಮರುವಿತರಣೆಯಿಂದ ಪ್ರಚೋದಿಸಲ್ಪಟ್ಟಿರುತ್ತದೆ.ಉತ್ತರಾಘಾತಗಳ ರೀತಿಯಲ್ಲೇ ಇದ್ದರೂ ಸಹ, ದೋಷದ ಮಗ್ಗುಲಲ್ಲಿರುವ ಭಾಗಗಳ ಮೇಲೆ ಘಟಿಸುವ ಈ ಬಿರುಗಾಳಿಗಳು, ಬಹಳಷ್ಟು ವರ್ಷಗಳ ನಂತರ ಸಂಭವಿಸುತ್ತವೆ. ಈ ಮುಂಚಿನ ಭೂಕಂಪಗಳಂತೆಯೇ ಹಾನಿಕಾರಕವಾಗಿರುವ, ಕಾಲಾನಂತರದ ಕೆಲವೊಂದು ಭೂಕಂಪಗಳೊಂದಿಗೆ ಅವು ಸಂಭವಿಸುತ್ತವೆ ೨೦ನೇ ಶತಮಾನದಲ್ಲಿ, ಟರ್ಕಿಯಲ್ಲಿನಉತ್ತರ ಅನಟೋಲಿಯನ್ ದೋಷಕ್ಕೆ ಬಡಿದ ಸುಮಾರು ಒಂದು ಡಜನ್ ಭೂಕಂಪಗಳ ಸರಣಿಯಲ್ಲಿ ಇಂಥಾ ಒಂದು ನಮೂನೆಯು ಕಂಡುಬಂತು. ಅಷ್ಟೇ ಅಲ್ಲ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಂಭವಿಸಿದ ಹಳೆಯ ಬೃಹತ್ ಭೂಕಂಪಗಳ ಅಸಮಂಜಸ ಅಥವಾ ವಿಷಮ ಗುಚ್ಛಗಳೂ ಇದೇ ನಮೂನೆಯಲ್ಲಿವೆ ಎಂದು ತೀರ್ಮಾನಿಸಲಾಯಿತು.[೧೦][೧೧]
ಅಲ್ಪ ಪ್ರಮಾಣದ ಅಥವಾ ಕಿರುಸ್ವರೂಪದ ಭೂಕಂಪಗಳು ಹೆಚ್ಚೂಕಮ್ಮಿ ಎಡೆಬಿಡದೆ ವಿಶ್ವಾದ್ಯಂತ ಸಂಭವಿಸುತ್ತಲೇ ಇರುತ್ತವೆ. U.Sನಲ್ಲಿನಕ್ಯಾಲಿಫೋರ್ನಿಯಾ ಮತ್ತುಅಲಾಸ್ಕದಂತಹ ಸ್ಥಳಗಳಷ್ಟೇ ಅಲ್ಲದೇಗ್ವಾಟೆಮಾಲಾದಲ್ಲಿಯೂ ಇದು ಕಂಡುಬರುತ್ತದೆ.ಚಿಲಿ,ಪೆರು,ಇಂಡೋನೇಷಿಯಾ,ಇರಾನ್,ಪಾಕಿಸ್ತಾನ,ಪೋರ್ಚುಗಲ್‌ನಲ್ಲಿನಅಝೋರ್ಸ್,ಟರ್ಕಿ,ನ್ಯೂಜಿಲೆಂಡ್,ಗ್ರೀಸ್,ಇಟಲಿ, ಮತ್ತುಜಪಾನ್ ಇವೇ ಮೊದಲಾದ ದೇಶಗಳಲ್ಲಿಯೂ ಭೂಕಂಪ ಸಂಭವಿಸುತ್ತದೆ. ಆದರೆ,ನ್ಯೂಯಾರ್ಕ್ ನಗರ,ಲಂಡನ್, ಮತ್ತು ಆಸ್ಟ್ರೇಲಿಯಾ ಇವೇ ಮೊದಲಾದವುಗಳನ್ನು ಒಳಗೊಂಡಂತೆ ಭೂಕಂಪಗಳು ಎಲ್ಲಿಬೇಕಾದರೂ ಸಂಭವಿಸಬಲ್ಲವು.[೧೨] ಬೃಹತ್ ಪ್ರಮಾಣದ ಭೂಕಂಪಗಳು ಪದೇ ಪದೇ ಸಂಭವಿಸುವುದು ಕಡಿಮೆಯಿದ್ದು, ಇದರ ಹಿಂದಿರುವ ಸಂಬಂಧವುಘಾತೀಯವಾಗಿರುತ್ತದೆ ಅಥವಾ ಘಾತದ ವ್ಯಾಪ್ತಿಯಲ್ಲಿ ಬರುವಂತಿರುತ್ತದೆ. ಉದಾಹರಣೆಗೆ, ೫ರಷ್ಟು ಪ್ರಮಾಣಕ್ಕಿಂತ ದೊಡ್ಡದಾಗಿರುವ ಭೂಕಂಪಗಳಿಗೆ ಹೋಲಿಸಿದಾಗ, ೪ರಷ್ಟು ಪ್ರಮಾಣಕ್ಕಿಂತ ದೊಡ್ಡದಾಗಿರುವ ಭೂಕಂಪಗಳ ಸುಮಾರು ಹತ್ತು ಪಟ್ಟು ಇರುವ ಭೂಕಂಪಗಳು ಒಂದು ನಿರ್ದಿಷ್ಟ ಕಾಲದ ಅವಧಿಯಲ್ಲಿ ಸಂಭವಿಸುತ್ತವೆ. ಉದಾಹರಣೆಗೆ, (ಕಡಿಮೆ ಭೂಕಂಪಶೀಲತೆಯಿರುವ) ಯುನೈಟೆಡ್ ಕಿಂಗ್‌ಡಂನಲ್ಲಿ ಸರಾಸರಿ ಪುನರಾವರ್ತನೆಗಳು ಈ ರೀತಿ ಇರುತ್ತವೆ ಎಂದು ಲೆಕ್ಕಾಚಾರ ಮಾಡಲಾಗಿದೆ: ಅಂದರೆ, ಪ್ರತಿವರ್ಷವೂ ೩.೭ - ೪.೬ ಪ್ರಮಾಣದ ಭೂಕಂಪ ಸಂಭವಿಸಿದರೆ, ೪.೭ - ೫.೫ ಪ್ರಮಾಣದ ಭೂಕಂಪವು ಪ್ರತಿ ೧೦ ವರ್ಷಕ್ಕೊಮ್ಮೆ ಹಾಗೂ ೫.೬ ಅಥವಾ ಅದಕ್ಕಿಂತ ದೊಡ್ಡ ಪ್ರಮಾಣದ ಭೂಕಂಪವು ಪ್ರತಿ ೧೦೦ ವರ್ಷಗಳಿಗೊಮ್ಮೆ ಸಂಭವಿಸುತ್ತದೆ.[೧೩]ಗುಟೆನ್‌ಬರ್ಗ್-ರಿಕ್ಟರ‍್ ನಿಯಮಕ್ಕೆ ಇದೊಂದು ಉದಾಹರಣೆ.೧೯೩೧ರಲ್ಲಿ ಸುಮಾರು ೩೫೦ರಷ್ಟಿದ್ದ ಭೂಕಂಪ ಕೇಂದ್ರಗಳ ಸಂಖ್ಯೆಯು ಇಂದು ಅನೇಕ ಸಾವಿರಗಳಿಗೆ ಹೆಚ್ಚಿದೆ. ಇದರ ಪರಿಣಾಮವಾಗಿ ಹಿಂದೆ ಇದ್ದುದಕ್ಕಿಂತ ಹೆಚ್ಚೆಚ್ಚು ಭೂಕಂಪಗಳು ದಾಖಲಾಗುತ್ತಿವೆ. ಹಾಗಂತ ಭೂಕಂಪಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಇದರರ್ಥವಲ್ಲ; ಅದನ್ನು ದಾಖಲಿಸುವ ಉಪಕರಣಗಳಲ್ಲಿ ವಿಸ್ತೃತವಾದ ಸುಧಾರಣೆಯಾಗಿದೆ ಎಂದರ್ಥ.USGSಯು ಅಂದಾಜಿಸುವ ಪ್ರಕಾರ, ೧೯೦೦ರಿಂದ ಈಚೆಗೆ, ಪ್ರತಿ ವರ್ಷವೂ ಸರಾಸರಿ ೧೮ರಷ್ಟು ಪ್ರಮುಖ ಭೂಕಂಪಗಳು (೭.೦-೭.೯ರಷ್ಟು ಪ್ರಮಾಣದ್ದು) ಸಂಭವಿಸಿವೆ ಹಾಗೂ ಒಂದು ಮಹಾನ್ ಭೂಕಂಪವು (೮.೦ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ್ದು) ಸಂಭವಿಸಿದೆ ಮತ್ತು ಹೋಲಿಕೆಯ ದೃಷ್ಟಿಯಿಂದ ಈ ಸರಾಸರಿಯು ಸ್ಥಿರವಾಗಿದೆ.[೧೪]ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ಸಂಭವಿಸುವ ಪ್ರಮುಖ ಭೂಕಂಪಗಳ ಸಂಖ್ಯೆಯು ಕುಸಿದಿದೆ. ಆದರೂ, ಇದನ್ನೊಂದು ವ್ಯವಸ್ಥಿತ ಪ್ರವೃತ್ತಿ ಎನ್ನುವುದಕ್ಕಿಂತ, ಇದುಅಂಕಿ-ಅಂಶಗಳಲ್ಲಿನ ಏರಿಳಿತ ಅಥವಾ ಅನಿಶ್ಚಿತತೆಯಾಗಿರಬಹುದು ಎಂದು ಭಾವಿಸಲಾಗಿದೆ. ಭೂಕಂಪಗಳ ಗಾತ್ರ ಮತ್ತು ಆವರ್ತನೆಯ ಕುರಿತಾದ ಹೆಚ್ಚು ವಿಸ್ತೃತವಾದ ಅಂಕಿ-ಅಂಶಗಳನ್ನು USGSನಿಂದ ಪಡೆಯಬಹುದಾಗಿದೆ.[೧೫] ವಿಶ್ವದ ಭೂಕಂಪಗಳ ಪೈಕಿ ಬಹುಪಾಲು ಭೂಕಂಪಗಳು (೯೦%, ಮತ್ತು ದೊಡ್ಡದರ ಪೈಕಿ ೮೧%ನಷ್ಟು) ೪೦,೦೦೦ ಕಿಮೀನಷ್ಟು ಉದ್ದದ, ಕುದುರೆಲಾಳದ ಆಕಾರದಲ್ಲಿರುವ ವಲಯದಲ್ಲಿ ಸಂಭವಿಸುತ್ತವೆ. ಈ ವಲಯವನ್ನುಪೆಸಿಫಿಕ್‌ನ್ನು ಆವರಿಸಿರುವ ಭೂಕಂಪ ಪಟ್ಟಿ (ಸರ್ಕಮ್-ಪೆಸಿಫಿಕ್ ಸೈಸ್ಮಿಕ್ ಬೆಲ್ಟ್) ಎಂದು ಕರೆಯಲಾಗಿದ್ದು, ಇದುಬೆಂಕಿಯ ಪೆಸಿಫಿಕ್ ವರ್ತುಲ ಎಂದೂ ಪ್ರಸಿದ್ಧವಾಗಿದೆ. ಇದರ ಬಹುತೇಕ ಭಾಗವುಪೆಸಿಫಿಕ್ ಪದರವನ್ನು ಸುತ್ತವರೆಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ.[೧೬][೧೭]ಹಿಮಾಲಯ ಪರ್ವತಗಳಾದ್ಯಂತ ಸಂಭವಿಸುವ ಭೂಕಂಪಗಳಂತೆ, ಇತರ ಪದರದ ಗಡಿಗಳಲ್ಲೂ ಬೃಹತ್ ಪ್ರಮಾಣದ ಭೂಕಂಪಗಳು ಸಂಭವಿಸುತ್ತವೆ.ಮೆಕ್ಸಿಕೋ ನಗರ,ಟೋಕಿಯೋ ಅಥವಾಟೆಹ್ರಾನ್‌ಗಳಂತಹಬೃಹತ್-ನಗರಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದಿಂದ, ಹೆಚ್ಚುಭೂಕಂಪದ ಅಪಾಯಗಳಿರುವ ಇಂಥಾ ಪ್ರದೇಶಗಳಲ್ಲಿ ಕೇವಲ ಒಂದೇ ಒಂದು ಕಂಪನವೂ ಸಹ ಸುಮಾರು ೩ ದಶಲಕ್ಷ ಜನರ ಪ್ರಾಣಕ್ಕೆ ಎರವಾಗಬಹುದು ಎಂದು ಕೆಲವೊಂದು ಭೂಕಂಪ ತಜ್ಞರು ಎಚ್ಚರಿಸುತ್ತಿದ್ದಾರೆ.[೧೮][೧೯]
ಭೂಮಿಯರಾಚನಿಕ ವ್ಯತ್ಯಾಸಗಳ ಪದರಗಳ ಚಲನೆಯಿಂದಾಗಿ ಬಹುತೇಕ ಭೂಕಂಪಗಳು ಸಂಭವಿಸುತ್ತವೆಯಾದರೂ, ಮಾನವನ ಚಟುವಟಿಕೆಯೂ ಸಹ ಭೂಕಂಪವನ್ನು ಉಂಟುಮಾಡಬಲ್ಲದು.ಈ ವಿದ್ಯಮಾನಕ್ಕೆ ನಾಲ್ಕು ಪ್ರಮುಖ ಕಾರಣಗಳು ಕೊಡುಗೆಯನ್ನು ನೀಡುತ್ತವೆ. ಅವುಗಳೆಂದರೆ, ಬೃಹತ್ಅಣೆಕಟ್ಟುಗಳು ಹಾಗೂಕಟ್ಟಡಗಳನ್ನು ಕಟ್ಟುವುದು,ಬಾವಿಗಳನ್ನು ಕೊರೆಯುವುದು ಹಾಗೂ ಅವುಗಳಿಗೆ ದ್ರವಪದಾರ್ಥವನ್ನು ಸೇರಿಸುವುದು, ಮತ್ತುಕಲ್ಲಿದ್ದಲು ಗಣಿಕಾರಿಕೆ ಹಾಗೂತೈಲ ನಿಕ್ಷೇಪಗಳಿಗಾಗಿ ಕೊರೆಯುವುದು.[೨೦]ಚೈನಾದಸಿಚುವಾನ್ ಪ್ರಾಂತ್ಯದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ2008ರ ಸಿಚುವಾನ್ ಭೂಕಂಪ ಪ್ರಾಯಶಃ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಬಲ್ಲದು. ಈ ಕಂಪನದಿಂದಾಗಿ ೬೯,೨೨೭ ಸಾವುಗಳು ಸಂಭವಿಸಿದ್ದು, ಇದು ಇದುವರೆಗಿನಭೂಕಂಪಗಳ ಪೈಕಿ 19ನೇ ಅತ್ಯಂತ ಮಾರಣಾಂತಿಕ ಭೂಕಂಪವಾಗಿದೆ. ದೋಷದ ಒತ್ತಡವನ್ನು1,650 feet (503 m)ಝಿಪಿಂಗ್‌ಪು ಅಣೆಕಟ್ಟು ಹೊಯ್ದಾಡಿಸಿ ತಳ್ಳಿದೆ ಎಂದು ನಂಬಲಾಗಿದ್ದು, ಈ ಒತ್ತಡವೇ ಪ್ರಾಯಶಃ ಭೂಕಂಪದ ಶಕ್ತಿಯನ್ನು ಹೆಚ್ಚಿಸಿ, ಸದರಿ ದೋಷದ ಚಲನೆಯ ದರವನ್ನು ಉತ್ಕರ್ಷಿಸಿದೆ ಎಂದು ಭಾವಿಸಲಾಗಿದೆ.[೨೧] ಆಸ್ಟ್ರೇಲಿಯಾದ ಇತಿಹಾಸದಲ್ಲಿನ ಅತ್ಯಂತ ದೊಡ್ಡ ಭೂಕಂಪಕ್ಕೂ ಮಾನವನ ಪ್ರಚೋದನೆ ಇತ್ತು. ಕಲ್ಲಿದ್ದಲ ಗಣಿಕಾರಿಕೆ ಈ ಭೂಕಂಪಕ್ಕೆ ಕಾರಣವಾಗಿತ್ತು.ನ್ಯೂಕ್ಯಾಸಲ್ ನಗರವನ್ನು ಕಲ್ಲಿದ್ದಲು ಗಣಿಪ್ರದೇಶಗಳ ಬೃಹತ್ ವಿಭಾಗವೊಂದರ ಮೇಲೆ ಕಟ್ಟಲಾಗಿತ್ತು.ದೋಷವೊಂದರಿಂದ ಹುಟ್ಟಿದ ಭೂಕಂಪವು, ಗಣಿಕಾರಿಕೆ ಪ್ರಕ್ರಿಯೆಯಲ್ಲಿ ತೆಗೆದುಹಾಕಲ್ಪಟ್ಟ ಮಿಲಿಯಗಟ್ಟಲೆ ಕಲ್ಲುಬಂಡೆಗಳ ಕಾರಣದಿಂದ ಪುನಶ್ಚೇತನಗೊಂಡಿತು.[೨೨]
ಭೂಕಂಪಗಳ ಅಲೆಗಳು ಸಮಗ್ರಭೂಮಿಯ ಆಂತರಿಕ ರಚನೆಯಾದ್ಯಂತ ಸಂಚರಿಸುವುದರಿಂದಾಗಿ, ಬಹಳ ದೂರದ ವ್ಯಾಪ್ತಿಯವರೆಗೂ ಭೂಕಂಪಗಳನ್ನು ಭೂಕಂಪಮಾಪಕಗಳ ನೆರವಿನಿಂದ ದಾಖಲಿಸಬಹುದು.ಕ್ಷಣದ ಪ್ರಮಾಣ ಮಾಪಕದ (ಇದಕ್ಕೂ ಮುಂಚೆ, ವಿಶಾಲವಾದ ಪ್ರದೇಶಗಳ ಮೇಲೆ ಗಂಭೀರ ಸ್ವರೂಪದ ಹಾನಿಯನ್ನು ಉಂಟುಮಾಡುತ್ತಿದ್ದ ೭ರಷ್ಟು ಪ್ರಮಾಣದ ಭೂಕಂಪವನ್ನು ಅಳೆಯಲು ರಿಕ್ಟರ‍್ ಮಾಪಕವನ್ನು ಬಳಸಲಾಗುತ್ತಿತ್ತು) ಮೇಲಿನ ಅಂಕಿಗಳ ನೆರವಿನೊಂದಿಗೆ ಭೂಕಂಪವೊಂದರ ಪರಿಪೂರ್ಣ ಪ್ರಮಾಣವನ್ನು ರೂಢಿಯಂತೆ ದಾಖಲಿಸಲಾಗುತ್ತದೆ. ಅದೇ ರೀತಿಯಲ್ಲಿ, ಗ್ರಹಿಸಲಾದ ಪ್ರಮಾಣವನ್ನು ರೂಪಾಂತರಿತ ಮೆರ್ಕ್ಯಾಲಿ ಪಟ್ಟಿಯನ್ನು (II-XIIಯಷ್ಟು ತೀವ್ರತೆಯುಳ್ಳದ್ದು) ಬಳಸಿ ದಾಖಲಿಸಲಾಗುತ್ತದೆ. ಪ್ರತಿಯೊಂದು ಕಂಪನವೂ ವಿವಿಧ ಬಗೆಯ ಭೂಕಂಪಗಳ ಅಲೆಯನ್ನು ಉತ್ಪತ್ತಿ ಮಾಡುತ್ತದೆ. ಈ ಅಲೆಗಳು ವೈವಿಧ್ಯಮಯ ವೇಗಗಳೊಂದಿಗೆ ಬಂಡೆಗಳ ಮೂಲಕ ಸಂಚರಿಸುತ್ತವೆ. ಅನುಲಂಬವಾಗಿರುವ ಅಥವಾ ಉದ್ದದP-ಅಲೆಗಳು (ಆಘಾತ- ಅಥವಾ ಒತ್ತಡದ ಅಲೆಗಳು), ಅಡ್ಡಡ್ಡವಾದS-ಅಲೆಗಳು (ಎರಡೂ ಕಾಯದ ಅಲೆಗಳು) ಮತ್ತು ಹಲವಾರುಮೇಲ್ಮೈ ಅಲೆಗಳು (ರೇಲೀ ಅಂಡ್ಲವ್ ಅಲೆಗಳು) ಇವೇ ಮೊದಲಾದ ವೈವಿಧ್ಯಮಯ ಅಲೆಗಳು ಇದರಲ್ಲಿ ಸೇರಿವೆ. ಮಾಧ್ಯಮದಸಾಂದ್ರತೆ ಹಾಗೂಸ್ಥಿತಿಸ್ಥಾಪಕತೆಯನ್ನು ಅವಲಂಬಿಸಿ, ಭೂಕಂಪದ ಅಲೆಗಳಪ್ರಸರಣ ವೇಗವು ಸರಿಸುಮಾರು ೩ ಕಿಮೀಗಳಿಂದ ೧೩ ಕಿಮೀಗಳವರೆಗೆ ಇರುತ್ತವೆ.ಭೂಮಿಯ ಆಂತರಿಕ ರಚನೆಯಲ್ಲಿ, ಆಘಾತದ- ಅಥವಾ P ಅಲೆಗಳು S ಅಲೆಗಳಿಗಿಂತ ಅತಿ ಹೆಚ್ಚುವ ವೇಗವಾಗಿ (ಸರಿಸುಮಾರು ಅನುಪಾತ ೧.೭ : ೧) ಸಂಚರಿಸುತ್ತವೆ.ಅಧಿಕೇಂದ್ರದಿಂದ ವೀಕ್ಷಣಾಲಯದವರೆಗಿನಸಂಚಾರದ ಅವಧಿಯಲ್ಲಿನ ವ್ಯತ್ಯಾಸಗಳು ದೂರದ ಅಳತೆಯಾಗಿದ್ದು, ಇದನ್ನು ಭೂಮಿಯೊಳಗಿನ ಕಂಪನದ ಮೂಲಗಳು ಹಾಗೂ ರಚನೆಗಳೆರಡನ್ನೂ ಚಿತ್ರಿಸಲು ಬಳಸಬಹುದಾಗಿರುತ್ತದೆ. ಅಷ್ಟೇ ಅಲ್ಲ,ಅಡಿಯ ಕೇಂದ್ರದ ಆಳವನ್ನು ಸ್ಥೂಲವಾಗಿ ದಾಖಲಿಸಲೂ ಇದನ್ನು ಬಳಸಬಹುದಾಗಿದೆ.ಘನವಾದ ಬಂಡೆಯಲ್ಲಿ P-ಅಲೆಗಳು ಪ್ರತಿ ಸೆಕೆಂಡಿಗೆ ಸುಮಾರು ೬ ರಿಂದ ೭ ಕಿಮೀವರೆಗೆ ಸಂಚರಿಸುತ್ತವೆ; ಆಳವಾದ ಮ್ಯಾಂಟಲ್ ಹೊದಿಕೆಯೊಳಗಡೆ (ಅಂದರೆ, ಭೂಮಿಯ ಅತ್ಯಂತ ಒಳಭಾಗವಾದ ತಿರುಳಿಗೂ ಅತ್ಯಂತ ಹೊರಭಾಗವಾದ ಚಿಪ್ಪಿಗೂ ಮಧ್ಯದಲ್ಲಿ ಇರುವ ಭಾಗದೊಳಗಡೆ) ಈ ವೇಗವು ಪ್ರತಿ ಸೆಕೆಂಡಿಗೆ ಸರಿಸುಮಾರು ೧೩ ಕಿಮೀಗಳವರೆಗೆ ಹೆಚ್ಚುತ್ತದೆ.ವಿರಳವಾದ ಸಂಚಯಗಳಲ್ಲಿ S-ಅಲೆಗಳ ವೇಗವು ಪ್ರತಿ ಸೆಕೆಂಡಿಗೆ ೨–೩ ಕಿಮೀಗಳಷ್ಟಿದ್ದರೆ, ಭೂಮಿಯ ಹೊರಪದರದಲ್ಲಿ ಪ್ರತಿ ಸೆಕೆಂಡಿಗೆ ೪–೫ ಕಿಮೀಗಳಷ್ಟಿರುತ್ತದೆ ಹಾಗೂ ಆಳವಾದ ಮ್ಯಾಂಟಲ್ ಹೊದಿಕೆಯಲ್ಲಿ ೭ ಕಿಮೀಗಳವರೆಗೆ ಇರುತ್ತದೆ. ಇದರ ಪರಿಣಾಮವಾಗಿ, ದೂರದ ಪ್ರದೇಶದ ಭೂಕಂಪವೊಂದರ ಮೊದಲ ಅಲೆಗಳು ಭೂಮಿಯ ಮ್ಯಾಂಟಲ್ ಹೊದಿಕೆಯ ಮಾರ್ಗವಾಗಿ ವೀಕ್ಷಣಾಲಯವೊಂದಕ್ಕೆ ಬಂದು ತಲುಪುತ್ತದೆ.ಮಾರ್ಗದರ್ಶಕ ಸೂತ್ರ : ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ, ಭೂಕಂಪಕ್ಕಿರುವ ಕಿಲೋಮೀಟರ‍್ ಅಂತರವು P ಮತ್ತು S ಅಲೆಗಳ ನಡುವಿನ ಸೆಕೆಂಡುಗಳ ಸಂಖ್ಯೆಗಳಾಗಿರುತ್ತವೆtimes ೮http://hypertextbook.com/facts/2001/PamelaSpiegel.shtml. ಮೇಲ್ಮೈನ ಅಡಿಯಲ್ಲಿರುವ ರಚನೆಯ ಅಸಮ ಗುಣಲಕ್ಷಣಗಳಿಂದಾಗಿ ಸ್ವಲ್ಪವೇ ದಿಕ್ಚ್ಯುತಿ ಅಥವಾ ಮಾರ್ಗಬದಲಾವಣೆಯು ಸಂಭವಿಸುತ್ತದೆ. ಭೂಕಂಪಲೇಖಗಳ ಇಂಥಾ ವಿಶ್ಲೇಷಣೆಯಿಂದಾಗಿ ಭೂಮಿಯ ತಿರುಳು ಅಥವಾ ದಿಂಡುಬೆನೋ ಗುಟೆನ್‌ಬರ್ಗ್‌ನಿಂದ ೧೯೧೩ರಲ್ಲಿ ಪತ್ತೆಹಚ್ಚಲ್ಪಟ್ಟಿತು.
1755ರ ಲಿಸ್ಬನ್ ಭೂಕಂಪದ ನಂತರ ಹಾಳಾಗಿರುವ ಮತ್ತು ಬೆಂಕಿಗೆ ಸಿಲುಕಿರುವ ಲಿಸ್ಬನ್‌ನ್ನು 1755ರ ತಾಮ್ರದ ಕೆತ್ತನೆ ಚಿತ್ರಿಸಿರುವುದುಬಂದರಿನಲ್ಲಿರುವ ಹಡಗುಗಳನ್ನು ಸುನಾಮಿಯೊಂದು ಧ್ವಂಸಮಾಡುವುದು.
ಭೂಕಂಪಗಳ ಅನೇಕ ಪರಿಣಾಮಗಳಲ್ಲಿ ಈ ಕೆಳಗಿನವುಗಳು ಸೇರಿಕೊಂಡಿದ್ದರೂ ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ:
ಅಲುಗಾಡುವಿಕೆ ಮತ್ತು ನೆಲದ ಬಿರಿಯುವಿಕೆಯು ಭೂಕಂಪಗಳಿಂದ ಸೃಷ್ಟಿಯಾದ ಮುಖ್ಯ ಪರಿಣಾಮಗಳಾಗಿವೆ. ಇದರಿಂದಾಗಿ ಕಟ್ಟಡಗಳು ಮತ್ತು ಇತರ ಗಡುಸಾದ ರಚನೆಗಳಿಗೆ ಹೆಚ್ಚೂ ಕಮ್ಮಿ ತೀವ್ರಸ್ವರೂಪದ ಹಾನಿಯುಂಟಾಗುತ್ತದೆ.ಭೂಕಂಪದಪ್ರಮಾಣ,ಅಧಿಕೇಂದ್ರದಿಂದ ಇರುವ ಅಂತರ ಮತ್ತು ಸ್ಥಳೀಯ ಭೂವೈಜ್ಞಾನಿಕ ಹಾಗೂ ಭೂರೂಪಶಾಸ್ತ್ರದ ಸ್ಥಿತಿಗತಿಗಳ ಸಂಕೀರ್ಣ ಸಂಯೋಜನೆಯ ಮೇಲೆ ಸ್ಥಳೀಯ ಪರಿಣಾಮಗಳ ತೀವ್ರತೆ ಅವಲಂಬಿತವಾಗಿರುತ್ತದೆ. ಈ ಸ್ಥಿತಿಗತಿಗಳುಅಲೆಯ ಪ್ರಸರಣವನ್ನು ವರ್ಧಿಸುವ ಇಲ್ಲವೇ ಕುಗ್ಗಿಸುವ ಶಕ್ತಿಯನ್ನು ಹೊಂದಿರುತ್ತವೆ.[೨೩] ನೆಲದವೇಗೋತ್ಕರ್ಷ ಅಥವಾ ಗತಿವೃದ್ಧಿಯಿಂದ ನೆಲದ-ಬಿರಿಯುವಿಕೆಯನ್ನು ಅಳೆಯಲಾಗುತ್ತದೆ.ನಿರ್ದಿಷ್ಟವಾಗಿರುವ ಸ್ಥಳೀಯ ಭೂವೈಜ್ಞಾನಿಕ, ಭೂರೂಪಶಾಸ್ತ್ರದ ಮತ್ತು ಭೂರಾಚನಿಕ ಗುಣಲಕ್ಷಣಗಳು, ಕಡಿಮೆ-ತೀವ್ರತೆಯ ಭೂಕಂಪಗಳಿಂದಲೂ ಹೆಚ್ಚಿನ ಮಟ್ಟಗಳ ಅಲುಗಾಟವನ್ನು ನೆಲೆದ ಮೇಲ್ಮೈಯಲ್ಲಿ ಹುಟ್ಟುಹಾಕಬಲ್ಲವು. ಈ ಪರಿಣಾಮವನ್ನು ಆ ಪ್ರದೇಶದ ಅಥವಾ ಸ್ಥಳೀಯ ವರ್ಧನೆ ಎಂದು ಕರೆಯಲಾಗುತ್ತದೆ. ಗಡುಸಾಗಿರುವ ಆಳವಾದ ಮಣ್ಣುಗಳ ಪ್ರದೇಶದಿಂದ ಮೃದುವಾಗಿರುವ ಮೇಲ್ಮೈನ ಮಣ್ಣುಗಳ ಪ್ರದೇಶಕ್ಕೆಭೂಕಂಪಗಳ ಚಲನೆಯು ವರ್ಗಾವಣೆಯಾಗುವುದರಿಂದಾಗಿ ಮತ್ತು ಸಂಚಯಗಳ ವಿಶಿಷ್ಟ ಜ್ಯಾಮಿತೀಯ ಮಾದರಿಯಿಂದಾಗಿ ಹುಟ್ಟಿಕೊಂಡ ಭೂಕಂಪಗಳ ಶಕ್ತಿಯ ಕೇಂದ್ರೀಕರಣದಿಂದಾಗಿ ಇದು ಮುಖ್ಯವಾಗಿ ಸಂಭವಿಸುತ್ತದೆ. ನೆಲದ ಬಿರಿಯುವಿಕೆ ಎಂಬುದು, ಕಣ್ಣಿಗೆ ಕಾಣಿಸುವ ಒಡೆಯುವಿಕೆ ಮತ್ತು ದೋಷದ ಜಾಡಿನಾದ್ಯಂತ ಇರುವ ಭೂಮಿಯ ಮೇಲ್ಮೈನ ಜರುಗುವಿಕೆ ಅಥವಾ ಸ್ಥಾನಪಲ್ಲಟವಾಗಿರುತ್ತದೆ. ಬೃಹತ್ ಅಥವಾ ಪ್ರಮುಖ ಭೂಕಂಪಗಳ ಸಂದರ್ಭದಲ್ಲಿ ಇದರ ಪ್ರಮಾಣ ಅಥವಾ ಮಟ್ಟ ಹಲವು ಮೀಟರ್‌ಗಳವರೆಗೂ ಇರಬಹುದು.ಅಣೆಕಟ್ಟುಗಳು, ಸೇತುವೆಗಳು ಮತ್ತುಪರಮಾಣು ಶಕ್ತಿಯ ಕೇಂದ್ರಗಳಿಗೆ ನೆಲದ ಬಿರಿಯುವಿಕೆಯು ಅಪಾಯವನ್ನು ತಂದೊಡ್ಡುತ್ತದೆ. ಆದ್ದರಿಂದ, ಸದರಿ ರಚನೆಗಳ ಅಸ್ತಿತ್ವದ ಬಾಳಿಕೆಯ ಅವಧಿಯೊಳಗೇ, ನೆಲದ ಮೇಲ್ಮೈಯನ್ನು ಒಡೆಯಬಹುದಾದ ಯಾವುದೇ ಚಾಲ್ತಿಯಲ್ಲಿರುವ ದೋಷಗಳನ್ನು ಅತ್ಯಂತ ಎಚ್ಚರಿಕೆಯಿಂದ ಪತ್ತೆಹಚ್ಚುವುದು ಅತ್ಯಗತ್ಯವಾಗಿರುತ್ತದೆ.[೨೪]
ಭೂಕುಸಿತಗಳು ಪ್ರಮುಖ ಭೂವೈಜ್ಞಾನಿಕ ಅಪಾಯಗಳಾಗಿವೆ. ಏಕೆಂದರೆ ಭೂಕಂಪಗಳಂತೆಯೇ ಅವು ವಿಶ್ವದ ಯಾವುದೇ ಪ್ರದೇಶದಲ್ಲಿ ಸಂಭವಿಸಬಲ್ಲವು.ತೀವ್ರ ಸ್ವರೂಪದ ಬಿರುಗಾಳಿಗಳು, ಭೂಕಂಪಗಳು, ಅಗ್ನಿಪರ್ವತದ ಚಟುವಟಿಕೆ, ಕಡಲತೀರ ಪ್ರದೇಶದ ಅಲೆಗಳ ಹೊಡೆತ ಅಥವಾ ದಾಳಿ, ಮತ್ತು ಕಾಡ್ಗಿಚ್ಚುಗಳು ಇಳಿಜಾರಿನ ಅಸ್ಥಿರತೆಯನ್ನು ಉಂಟುಮಾಡಬಲ್ಲವು. ತುರ್ತುರಕ್ಷಣಾ ಸಿಬ್ಬಂದಿಯು ರಕ್ಷಣೆಯ ಪ್ರಯತ್ನಗಳನ್ನು ಮಾಡುತ್ತಿರುವಾಗಲೂ ಸಹ ಭೂಕುಸಿತದ ಅಪಾಯವು ಸಂಭವಿಸುವ ಸಾಧ್ಯತೆಯಿರುತ್ತದೆ.[೨೫]
ಭೂಕಂಪವಾದ ನಂತರವಿದ್ಯುತ್ ಶಕ್ತಿ ಅಥವಾ ಅನಿಲದ ಮಾರ್ಗಗಳು ಕತ್ತರಿಸಲ್ಪಟ್ಟಾಗಬೆಂಕಿಗಳು ಅಥವಾ ಉರಿಗಳು ಹುಟ್ಟಿಕೊಳ್ಳಬಹುದು.ನೀರಿನ ಕೊಳವೆಗಳು ಛಿದ್ರವಾದಾಗ ಮತ್ತು ಅದರಿಂದಾಗಿ ಒತ್ತಡವು ನಷ್ಟವಾದಾಗ, ಒಮ್ಮೆ ಶುರುವಾದ ಬೆಂಕಿಯ ಜ್ವಾಲೆಯು ಹರಡದಂತೆ ನಂದಿಸುವುದೂ ಸಹ ಕಷ್ಟವಾಗಿ ಪರಿಣಮಿಸಬಹುದು.ಉದಾಹರಣೆಗೆ,1906ರ ಸ್ಯಾನ್ ಫ್ರಾನ್ಸಿಸ್ಕೋ ಭೂಕಂಪದಲ್ಲಿ ಸಂಭವಿಸಿದ ಸಾವುಗಳ ಪೈಕಿ, ಸ್ವತಃ ಭೂಕಂಪಕ್ಕಿಂತ ಅದರ ಪರಿಣಾಮವಾಗಿ ಹುಟ್ಟಿಕೊಂಡ ಬೆಂಕಿಯಿಂದ ಸಂಭವಿಸಿದ ಸಾವುಗಳೇ ಹೆಚ್ಚಾಗಿದ್ದವು.[೨೬]
ಅಲುಗಾಟದ ಕಾರಣದಿಂದಾಗಿ, ನೀರು-ತುಂಬಿಕೊಂಡಕಣಕಣದಂತಿರುವ ಸಾಮಗ್ರಿಯು (ಮರಳಿನಂತಿರುವುದು) ತಾತ್ಕಾಲಿಕವಾಗಿ ತನ್ನ ಬಲವನ್ನು ಕಳೆದುಕೊಂಡು,ಘನ ಸ್ಥಿತಿಯಿಂದದ್ರವ ಸ್ಥಿತಿಗೆ ರೂಪಾಂತರಗೊಂಡಾಗ ಮಣ್ಣಿನ ದ್ರವೀಕರಣ ಕಂಡುಬರುತ್ತದೆ. ಮಣ್ಣಿನ ದ್ರವೀಕರಣದಿಂದಾಗಿ ಕಟ್ಟಡಗಳು ಅಥವಾ ಸೇತುವೆಗಳಂತಹ ಗಡುಸಾದ ರಚನೆಗಳು ದ್ರವೀಕೃತ ಸಂಚಯಗಳೊಳಗೆ ಬಾಗಿಕೊಳ್ಳಬಹುದು ಅಥವಾ ಮುಳುಗಬಹುದು. ಇದು ಭೂಕಂಪಗಳ ವಿನಾಶಕ ಪರಿಣಾಮಗಳಲ್ಲಿ ಒಂದಾಗಬಲ್ಲದು.ಉದಾಹರಣೆಗೆ,1964ರ ಅಲಾಸ್ಕ ಭೂಕಂಪದಲ್ಲಿ, ಮಣ್ಣಿನ ದ್ರವೀಕರಣದಿಂದಾಗಿ ಅನೇಕ ಕಟ್ಟಡಗಳು ನೆಲದೊಳಗೆ ಮುಳುಗಿ, ಅಂತಿಮವಾಗಿ ತಮ್ಮ ಮೇಲೆ ತಾವೇ ಕುಸಿದುಬಿದ್ದವು.[೨೭]
ಸುನಾಮಿಗಳು ದೀರ್ಘ-ತರಂಗಾಂತರದ, ದೀರ್ಘಾವಧಿಯ ಸಮುದ್ರದ ಅಲೆಗಳಾಗಿದ್ದು, ಬೃಹತ್ ಪ್ರಮಾಣಗಳ ನೀರಿನ ಒಂದು ಹಠಾತ್ ಅಥವಾ ಏಕಾಏಕಿ ಚಲನೆಯಿಂದ ಅವು ಹುಟ್ಟಿಕೊಳ್ಳುತ್ತವೆ.ಮುಕ್ತವಾಗಿರುವ ಸಾಗರದಲ್ಲಿ ಅಲೆಯ ತುದಿಗಳ ನಡುವಿನ ಅಂತರವು ೧೦೦ ಕಿಲೋಮೀಟರ್‌ಗಳನ್ನು ದಾಟಲು ಸಾಧ್ಯವಿದ್ದು, ಅಲೆಯ ಅವಧಿಗಳು ಐದು ನಿಮಿಷಗಳಿಂದ ಒಂದು ಗಂಟೆಯವರೆಗೂ ಬದಲಾಗುತ್ತಾ ಹೋಗುತ್ತವೆ.ನೀರಿನ ಆಳವನ್ನು ಅವಲಂಬಿಸಿ, ಇಂಥಾ ಸುನಾಮಿಗಳು ಪ್ರತಿ ಗಂಟೆಗೆ ೬೦೦-೮೦೦ ಕಿಲೋಮೀಟರುಗಳಷ್ಟು ದೂರಕ್ಕೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.ಒಂದು ಭೂಕಂಪ ಅಥವಾ ಸಮುದ್ರಾಂತರ ಭೂಕುಸಿತದ ಕಾರಣದಿಂದ ಹುಟ್ಟಿಕೊಂಡ ಬೃಹತ್ ಅಲೆಗಳು ಕೇವಲ ಕೆಲವೇ ನಿಮಿಷಗಳಲ್ಲಿ ಹತ್ತಿರದ ಕರಾವಳಿ ಪ್ರದೇಶಗಳನ್ನು ಪ್ರವಾಹದಲ್ಲಿ ಮುಳುಗಿಸಬಲ್ಲವು.ಸುನಾಮಿಗಳು ಮುಕ್ತ ಸಾಗರದಾದ್ಯಂತ ಸಾವಿರಾರು ಕಿಲೋಮೀಟರುಗಳವರೆಗೆ ಸಂಚರಿಸಬಲ್ಲವು ಮತ್ತು ತಮ್ಮ ಸೃಷ್ಟಿಗೆ ಕಾರಣವಾದ ಭೂಕಂಪಗಳು ಸಂಭವಿಸಿದ ಕೆಲವೇ ಗಂಟೆಗಳ ನಂತರ ದೂರದ ತೀರಪ್ರದೇಶದ ಮೇಲೆ ನಷ್ಟಗಳನ್ನು ಉಂಟುಮಾಡಬಲ್ಲವು.[೨೮]
ಸಾಧಾರಣವಾಗಿ, ರಿಕ್ಟರ‍್ ಮಾಪಕದಲ್ಲಿ ೭.೫ರಷ್ಟು ಪ್ರಮಾಣಕ್ಕಿಂತ ಕಡಿಮೆ ಇರುವ ಉಪವಾಹಿ ಭೂಕಂಪಗಳು ಸುನಾಮಿಗಳನ್ನು ಉಂಟುಮಾಡುವುದಿಲ್ಲವಾದರೂ ಇಂಥಾ ಕೆಲವೊಂದು ನಿದರ್ಶನಗಳು ದಾಖಲಾಗಿವೆ.೭.೫ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಭೂಕಂಪಗಳಿಂದ ಅತಿ ವಿಧ್ವಂಸಕಾರಕ ಸುನಾಮಿಗಳು ಸಂಭವಿಸುತ್ತವೆ.[೨೮]
ಭೂಮಿಯನ್ನು ತಲುಪುವ ಯಾವುದೇ ಪ್ರಮಾಣದ ನೀರಿನ ಉಕ್ಕಿಹರಿಯುವಿಕೆಗೆ ಪ್ರವಾಹ ಎಂದು ಹೆಸರು.[೨೯]ಒಂದು ನದಿ ಅಥವಾ ಸರೋವರದಂತಹ ಯಾವುದೇ ನೀರಿನ ಸಂಗ್ರಹದೊಳಗಿನ ನೀರಿನ ಪ್ರಮಾಣವು ಅದರ ವಾಸ್ತವ ಸ್ವರೂಪದ ಒಟ್ಟು ಸಾಮರ್ಥ್ಯಕ್ಕಿಂತ ಹೆಚ್ಚಾದಾಗ ಪ್ರವಾಹಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಇದರ ಪರಿಣಾಮವಾಗಿ ನೀರಿನ ಆಕರದ ಎಂದಿನ ಸಾಮಾನ್ಯ ಪರಿಧಿಯ ಆಚೆಗೆ ಒಂದಷ್ಟು ಪ್ರಮಾಣದ ನೀರು ಹರಿಯುತ್ತದೆ ಅಥವಾ ಕುಳಿತುಕೊಳ್ಳುತ್ತದೆ.ಆದರೂ, ಒಂದು ವೇಳೆ ಅಣೆಕಟ್ಟುಗಳು ಹಾನಿಗೊಳಗಾದರೆ, ಪ್ರವಾಹಗಳು ಭೂಕಂಪಗಳ ಎರಡನೇ ಹಂತದ ಪರಿಣಾಮಗಳಾಗಬಹುದು. ಭೂಕಂಪಗಳು ನದಿಯ ಅಣೆಕಟ್ಟುಗಳೊಳಗೆ ಭೂಕುಸಿತವನ್ನು ಉಂಟುಮಾಡಬಹುದಾದ್ದರಿಂದ, ಅದು ನಂತರ ಕುಸಿದು ಪ್ರವಾಹಗಳನ್ನು ಉಂಟುಮಾಡುತ್ತದೆ.[೩೦]ತಜಿಕಿಸ್ತಾನ್‌ನಲ್ಲಿನಸರೇಝ್ ಸರೋವರದ ಕೆಳಗಿರುವ ಕ್ಷೇತ್ರವು ಮಹಾಕ್ಷೋಭೆಯ ಪ್ರವಾಹದ ಅಪಾಯದಲ್ಲಿದೆ. ಏಕೆಂದರೆ, ಭೂಕಂಪದಿಂದ ರೂಪುಗೊಂಡಿರುವ,ಉಸಾಯ್ ಅಣೆಕಟ್ಟು ಎಂದು ಹೆಸರಾಗಿರುವಭೂಕುಸಿತದ ಅಣೆಕಟ್ಟೆಯು ಭವಿಷ್ಯದ ಭೂಕಂಪವೊಂದರ ಅವಧಿಯಲ್ಲಿ ವಿಫಲಗೊಂಡಲ್ಲಿ ಈ ಅಪಾಯವು ಸಂಭವಿಸಲಿದೆ.ಈ ಪ್ರವಾಹವು ಸ್ಥೂಲವಾಗಿ ೫ ದಶಲಕ್ಷ ಜನರಿಗೆ ತೊಂದರೆಯುಂಟುಮಾಡಲಿದೆ ಎಂದು ಪರಿಣಾಮದ ಅಂದಾಜು ಲೆಕ್ಕಾಚಾರಗಳು ಸೂಚಿಸಿವೆ.[೩೧]
ಭೂಕಂಪಗಳಿಂದಾಗಿರೋಗ, ಮೂಲಭೂತ ಅಗತ್ಯಗಳಲ್ಲಿನ ಕೊರತೆ, ಪ್ರಾಣಹಾನಿ, ಉನ್ನತ ಮಟ್ಟದ ವಿಮಾ ಕಂತುಗಳು, ಸಾರ್ವತ್ರಿಕಆಸ್ತಿ ಹಾನಿ, ರಸ್ತೆ ಮತ್ತು ಸೇತುವೆಗಳಿಗೆ ಹಾನಿ ಇವೇ ಮೊದಲಾದ ದುರಂತಗಳು ಸಂಭವಿಸಬಹುದು. ಅಷ್ಟೇ ಅಲ್ಲ, ಭೂಕಂಪದಿಂದಾಗಿ ಕಟ್ಟಡಗಳು ಕುಸಿಯಬಹುದು ಅಥವಾ ಕಟ್ಟಡಗಳ ತಳಪಾಯಗಳು ಅಸ್ಥಿರಗೊಂಡು, ಭವಿಷ್ಯದ ಭೂಕಂಪದಲ್ಲಿನ ಕಟ್ಟಡ ಕುಸಿಯುವಿಕೆಗೆ ಕಾರಣವಾಗಬಹುದು.ಅಗ್ನಿಪರ್ವತದ ವಿಸ್ಫೋಟಗಳಿಗೆ ಮುಂಚಿತವಾಗಿಯೂ ಭೂಕಂಪಗಳು ಬರಬಲ್ಲವಾಗಿದ್ದು, ಅವು ಮತ್ತಷ್ಟು ಹಾನಿಯನ್ನು ಉಂಟುಮಾಡುತ್ತವೆ; "ಒಂದು ಬೇಸಿಗೆಯಿಲ್ಲದ ವರ್ಷ" (೧೮೧೬)ದಲ್ಲಿದ್ದಂತೆ ಗಣನೀಯ ಪ್ರಮಾಣದ ಬೆಳೆಹಾನಿ ಇದಕ್ಕೆ ಉದಾಹರಣೆಯಾಗುತ್ತದೆ.[೩೨]
ಭವಿಷ್ಯದ ಭೂಕಂಪಗಳ ಚಟುವಟಿಕೆಯ ಸಂಭವನೀಯತೆಯನ್ನು ನಿರ್ಣಯಿಸಲುಭೂವಿಜ್ಞಾನಿಗಳು ಮತ್ತು ಇತರ ವಿಜ್ಞಾನಿಗಳು ಪ್ರದೇಶವೊಂದರ ಬಂಡೆಯನ್ನು ಪರೀಕ್ಷಿಸಿ, ಅದು "ಎಳೆತಕ್ಕೆ ಒಳಗಾದಂತೆ" ಕಾಣಿಸುತ್ತದೆಯೇ ಎಂದು ನಿಷ್ಕರ್ಷಿಸುತ್ತಾರೆ.ಭೂಕಂಪವೊಂದನ್ನು ಉಂಟುಮಾಡುವುದಕ್ಕೆ ಸಾಕಷ್ಟು ಪ್ರಮಾಣದಲ್ಲಿರುವ ಒತ್ತಡವನ್ನು ನಿರ್ಮಿಸಲು ದೋಷವೊಂದು ಎಷ್ಟು ಪೂರ್ವಸಿದ್ಧತಾ ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡುವುದಕ್ಕಾಗಿ ಕೈಗೊಳ್ಳುವ, ಪ್ರದೇಶವೊಂದರದೋಷಗಳ ಅಧ್ಯಯನವು ಕೂಡಾ ಒಂದು ಪರಿಣಾಮಕಾರೀ ಊಹಾ ಕೌಶಲವಾಗಿ ಪರಿಣಮಿಸುತ್ತದೆ.[೩೩] ಪ್ರತಿ ವರ್ಷವೂ ದೋಷದ ರೇಖೆಯ ಮೇಲೆ ಓರಣವಾಗಿ ಜೋಡಿಸಿಕೊಳ್ಳುತ್ತಾ ಬರುವ ಒತ್ತಡದ ಪ್ರಮಾಣ, ಈ ಹಿಂದೆ ಬೃಹತ್ ಕಂಪನವು ನಡೆದಾಗಿನಿಂದ ಸರಿದಿರುವ ಕಾಲ ಮತ್ತು ಕಡೆಯ ಭೂಕಂಪದ ಶಕ್ತಿ ಹಾಗೂ ಸಾಮರ್ಥ್ಯ ಇವೇ ಮೊದಲಾದ ಅಂಶಗಳನ್ನು ಅಳತೆಮಾಡಲಾಗುತ್ತದೆ.[೩೩] ಹೀಗೆ ಒಟ್ಟಾಗುವ ವಾಸ್ತವಾಂಶಗಳು, ಭೂಕಂಪವೊಂದನ್ನು ಹುಟ್ಟುಹಾಕಲು ದೋಷವೊಂದಕ್ಕೆ ಎಷ್ಟು ಪ್ರಮಾಣದ ಒತ್ತಡವು ಬೇಕಾಗುತ್ತದೆ ಎಂದು ನಿರ್ಣಯಿಸುವಲ್ಲಿ ನೆರವಾಗುತ್ತವೆ.
ಈ ವಿಧಾನವು ಪ್ರಯೋಜನಕಾರಿಯಾದರೂ ಸಹ, ಕೇವಲ ಕ್ಯಾಲಿಫೋರ್ನಿಯಾದಸ್ಯಾನ್ ಆಂಡ್ರಿಯಾಸ್ ದೋಷದ ಮೇಲೆ ಮಾತ್ರ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ.[೩೩]
ಗ್ರೀಕ್‌ನಅನಾಕ್ಸಾಗೋರಾಸ್‌ನ ಜೀವಿತಾವಧಿಯಿಂದ ೧೪ನೇ ಶತಮಾನದವರೆಗೂ ಭೂಕಂಪಗಳಿಗೆ "ಭೂಮಿಯ ಪೊಟರೆಗಳಲ್ಲಿನ ಗಾಳಿಯೇ (ಆವಿಕಣಗಳೇ)" ಕಾರಣ ಎಂದೇ ನಂಬಲಾಗಿತ್ತು.[೩೪] ಮಿಲೆಟ್‌ನ ಕಥೆಗಳು ಕೃತಿ ಬರೆದ, ೬೨೫ ರಿಂದ ೫೪೭ರವರೆಗೆ (BCE) ಬದುಕಿದ್ದ ಮಿಲೆಟ್ ಏಕೈಕ ದಾಖಲಿಗನಾಗಿದ್ದು, ಭೂಮಿ ಮತ್ತು ನೀರಿನ ನಡುವಣ ಉಂಟಾಗುವ ಸೆಳೆತದಿಂದಾಗಿ ಭೂಕಂಪಗಳು ಸಂಭವಿಸುತ್ತವೆ ಎಂದು ಆತ ನಂಬಿದ್ದ.[೩೪]ಗ್ರೀಕ್ ದಾರ್ಶನಿಕ ಅನಾಕ್ಸಮೈನ್ಸ್‌ನ (೫೮೫-೫೨೬ BCE) ನಂಬಿಕೆಗಳೂ ಸೇರಿದಂತೆ, ಈ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಇತರ ಸಿದ್ಧಾಂತಗಳು, ಶುಷ್ಕತೆ ಮತ್ತು ಆರ್ದ್ರತೆಯ ಕಿರು ವಾಲಿಕೆಯ ಸನ್ನಿವೇಶಗಳು ಭೂಕಂಪಗಳ ಚಟುವಟಿಕೆಯನ್ನು ಉಂಟುಮಾಡಿದವು ಎಂದೇ ನಂಬಿದ್ದವು. ಗ್ರೀಕ್ ದಾರ್ಶನಿಕ ಡೆಮೋಕ್ರೈಟಸ್ (೪೬೦-೩೭೧BCE), ಭೂಕಂಪಗಳು ಉಂಟಾಗಲು ನೀರನ್ನೇ ಸಾರ್ವತ್ರಿಕ ಕಾರಣವನ್ನಾಗಿ ಆರೋಪಿಸಿದ.[೩೪]ಹಿರಿಯ ಪ್ಲಿನ್ನಿಯು ಭೂಕಂಪಗಳನ್ನು "ಭೂಗತ ಚಂಡಮಾರುತದ ಮಳೆಗಳು" ಎಂದು ಕರೆದ.[೩೪]
ನಾರ್ವೆ ಭಾಷೆಯ ಪುರಾಣದಲ್ಲಿ, ಭೂಕಂಪಗಳನ್ನುಲೋಕಿ ದೇವರ ಬಿರುಸಾದ ಹೆಣಗಾಟ ಎಂಬಂತೆ ವಿವರಿಸಲಾಗಿತ್ತು.ಕಿರುಕುಳದ ಮತ್ತು ಸೆಣಸಾಟದದೇವರಾದ ಲೋಕಿಯು, ಸೌಂದರ್ಯ ಮತ್ತು ಜ್ಞಾನದ ದೇವರಾದಬಾಲ್ದ್‌ರ್‌ನನ್ನು ಕೊಂದಾಗ ಅವನನ್ನು ಗುಹೆಯೊಂದರಲ್ಲಿ ಬಂಧಿಸಿಟ್ಟು, ನಂಜನ್ನು ಕಕ್ಕುತ್ತಿರುವ ವಿಷಯುಕ್ತ ಸರ್ಪವೊಂದನ್ನು ಅವನ ತಲೆಯ ಮೇಲೆ ಇರಿಸುವ ಮೂಲಕ ಅವನನ್ನು ಶಿಕ್ಷಿಸಲಾಯಿತು.ಲೋಕಿಯ ಹೆಂಡತಿಯಾದಸೈಜಿನ್ ಅವನ ಪಕ್ಕದಲ್ಲಿ ನಿಂತು, ವಿಷವನ್ನು ಸಂಗ್ರಹಿಸಲು ಕೈನಲ್ಲಿ ಬೋಗುಣಿಯೊಂದನ್ನು ಹಿಡಿದುಕೊಂಡಿರುತ್ತಾಳೆ. ಆದರೆ ಅವಳು ಬೋಗುಣಿಯನ್ನು ಖಾಲಿಮಾಡಬೇಕಾಗಿ ಬಂದಾಗಲೆಲ್ಲಾ, ಲೋಕಿಯ ಮುಖದಮೇಲೆ ವಿಷವು ಜಿನುಗಿ, ಅದರಿಂದ ತಪ್ಪಿಸಿಕೊಳ್ಳಲು ಆತ ತಲೆಯನ್ನು ಎಳೆದುಕೊಳ್ಳಬೇಕಾಗಿ ಬರುವುದರಿಂದ ಹಾಗೂ ಆತನಿಗೆ ಕಟ್ಟಲಾಗಿರುವ ಕಟ್ಟುಗಳಿಂದ ಬಿಡಿಸಿಕೊಳ್ಳಲು ಬಡಿದಾಡುವುದರಿಂದ ಅದು ಭೂಮಿಯ ಕಂಪನಕ್ಕೆ ಕಾರಣವಾಗುತ್ತದೆ.[೩೫]ಗ್ರೀಕ್ ಪುರಾಣದಲ್ಲಿರುವಂತೆ,ಪಾಸಿಡಾನ್ ಭೂಕಂಪಗಳಿಗೆ ಕಾರಣನಾಗಿದ್ದ ಮತ್ತು ಅವುಗಳ ದೇವರಾಗಿದ್ದ.ಆತ ಕೆಟ್ಟ ಮನಸ್ಥಿತಿಯಲ್ಲಿದ್ದಾಗ, ನೆಲವನ್ನುತ್ರಿಶೂಲವೊಂದರಿಂದ ಚುಚ್ಚುತ್ತಿದ್ದ. ಇದರಿಂದಾಗಿ ಭೂಕಂಪ ಮತ್ತು ಇತರ ವಿಕೋಪಗಳು ಉಂಟಾಗುತ್ತಿದ್ದವು.ಜನರನ್ನು ಶಿಕ್ಷಿಸಲು ಹಾಗೂ ಅವರ ಮೇಲೆ ಭಯವನ್ನು ಹೇರಲು ಆತ ಭೂಕಂಪವನ್ನು ಪ್ರತೀಕಾರದ ರೂಪದಲ್ಲಿಯೂ ಬಳಸಿಕೊಂಡ.[೩೬]ಜಪಾನೀಯರ ಪುರಾಣದಲ್ಲಿ,ನಮಝು (鯰) ಒಂದು ದೈತ್ಯಬೆಕ್ಕುಮೀನು ಆಗಿದ್ದು ಅದು ಭೂಕಂಪಗಳನ್ನು ಉಂಟುಮಾಡುತ್ತದೆ.ಭೂಮಿಯ ಅಡಿಯಲ್ಲಿನ ಕೆಸರಿನಲ್ಲಿ ನಮಝು ವಾಸಿಸುತ್ತದೆ. ಒಂದು ಕಲ್ಲನ್ನಿಟ್ಟುಕೊಂಡು ಮೀನನ್ನು ಅಂಕೆಯಲ್ಲಿಡುವ ದೇವರಾದಕಶಿಮಾ ಈ ನಮಝುವನ್ನು ರಕ್ಷಿಸುತ್ತದೆ. ಕಶಿಮಾ ತನ್ನ ರಕ್ಷಣಾ ಕಾಪನ್ನು ಕೆಳಗೆ ಬೀಳಿಸಿದಾಗ, ನಮಝು ಹೊಯ್ದಾಡಲು ಅಥವಾ ಬಡಿದಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿರುಸಾದಭೂಕಂಪಗಳು ಸಂಭವಿಸುತ್ತವೆ.
ಆಧುನಿಕಜನಪ್ರಿಯ ಸಂಸ್ಕೃತಿಯಲ್ಲಿ, ಭೂಕಂಪಗಳ ವಿವರಣೆಯು ಪಾಳುಬಿದ್ದಿದ್ದ ಮಹಾನ್‌ನಗರಗಳ ನೆನಪಿನಿಂದ ಆಕಾರ ಪಡೆದುಕೊಂಡಿದೆ.1995ರಲ್ಲಿನ ಕೋಬ್ ಅಥವಾ1906ರಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಇಂಥಾ ಕೆಲವು ನಗರಗಳೆನ್ನಬಹುದು.[೩೭]ಕಲ್ಪಿತ ಕಥನಸಾಹಿತ್ಯದ ಭೂಕಂಪಗಳು ಆಕಸ್ಮಿಕವಾಗಿ ಸಂಭವಿಸುವ ಕಡೆಗೆ ಒಲವು ಹೊಂದಿದ್ದು, ಯಾವುದೇ ಮುನ್ನೆಚ್ಚರಿಕೆಯಿಲ್ಲದೇ ಸಂಭವಿಸುತ್ತವೆ.[೩೭] ಈ ಕಾರಣಕ್ಕಾಗಿ, ಭೂಕಂಪಗಳ ಕುರಿತಾದ ಕಥೆಗಳು ಸಾಮಾನ್ಯವಾಗಿ ವಿಪತ್ತುಗಳೊಂದಿಗೆ ಪ್ರಾರಂಭವಾಗುವುದರೊಂದಿಗೆ, ಅದರ ತತ್‌ಕ್ಷಣದ ಪರಿಣಾಮದ ಕಡೆಗೆ ಗಮನಹರಿಸುತ್ತವೆ.ಷಾರ್ಟ್ ವಾಕ್ ಟು ದಿ ಡೇಲೈಟ್ (೧೯೭೨),ದಿ ರ್ಯಾಗಿಡ್ ಎಡ್ಜ್ (೧೯೬೮) ಅಥವಾಆಫ್ಟರ್‌ಶಾಕ್: ಅರ್ಥ್‌ಕ್ವೇಕ್ ಇನ್ ನ್ಯೂಯಾರ್ಕ್ (೧೯೯೮) ಇವೇ ಮೊದಲಾದವು ಅಂಥಾ ಕೆಲವೊಂದು ಕೃತಿಗಳು.[೩೭]ಇದಕ್ಕಿರುವ ಮತ್ತೊಂದು ಗಮನಾರ್ಹ ಉದಾಹರಣೆಯೆಂದರೆ ಹೆನ್ರಿಕ್ ವಾನ್ ಕ್ಲೀಸ್ಟ್‌ನದಿ ಅರ್ಥ್‌ಕ್ವೇಕ್ ಇನ್ ಚಿಲಿ ಎಂಬ ಶಿಷ್ಟ ಕಿರು-ಕಾದಂಬರಿ. ೧೬೪೭ರಲ್ಲಿ ಸ್ಯಾಂಟಿಗೋದಲ್ಲಿ ಸಂಭವಿಸಿದ ವಿನಾಶವನ್ನು ಇದು ವಿವರಿಸುತ್ತದೆ.ಹರುಕಿ ಮುರಾಕಮಿಯಆಫ್ಟರ‍್ ದಿ ಕ್ವೇಕ್ ಎಂಬ ಕಿರು-ಕಥೆಗಳ ಸಂಕಲನವು ೧೯೯೫ರಲ್ಲಿ ಕೋಬ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮಗಳನ್ನು ವರ್ಣಿಸುತ್ತದೆ. ಕಥನ ಸಾಹಿತ್ಯದಲ್ಲಿ ದಾಖಲಿಸಲ್ಪಟ್ಟಿರುವ ಅತಿ ಜನಪ್ರಿಯ ಏಕ ಭೂಕಂಪವು ಕಾಲ್ಪನಿಕ "ಬೃಹತ್" ಸ್ವರೂಪದ್ದಾಗಿದ್ದು,ಕ್ಯಾಲಿಫೋರ್ನಿಯಾದಸ್ಯಾನ್ ಆಂಡ್ರಿಯಾಸ್ ದೋಷ ಎಂದು ಹಿಂದೊಮ್ಮೆ ಅಂದುಕೊಳ್ಳಲಾಗಿದ್ದುದರ ಕುರಿತಾಗಿದೆ.ರಿಕ್ಟರ‍್ 10 (೧೯೯೬) ಮತ್ತುಗುಡ್‌ಬೈ ಕ್ಯಾಲಿಫೋರ್ನಿಯಾ (೧೯೭೭) ಇವೇ ಮೊದಲಾದ ಕಾದಂಬರಿಗಳಲ್ಲಿ ಇಂಥದೇ ಚಿತ್ರಣ ಕಂಡುಬರುತ್ತದೆ.[೩೭]ಜಾಕೋಬ್ ಎಂ. ಆಪ್ಪೆಲ್‌ನಎ ಕಂಪ್ಯಾರಟೀವ್ ಸೈಸ್ಮಾಲಜಿ ಎಂಬ, ವ್ಯಾಪಕವಾಗಿ-ಸಂಕಲಿತ ಕಿರು-ಕಥೆಯು ಓರ್ವ ವಿರೋಧಿ ಕಲಾವಿದನ ಕುರಿತು ವರ್ಣಿಸುತ್ತದೆ. ಸದರಿ ಕಥೆಯಲ್ಲಿ ಪ್ರಳಯ ಸೂಚಕ ಭೂಕಂಪವೊಂದು ಸನ್ನಿಹಿತವಾಗಿರುವ ಬಗ್ಗೆ ಈ ಕಲಾವಿದ ವಯಸ್ಸಾದ ಮಹಿಳೆಯೋರ್ವಳಿಗೆ ಮನವರಿಕೆ ಮಾಡಿಕೊಡುತ್ತಾನೆ.[೩೮]ಜಿಮ್ ಷೆಪರ್ಡ್‌ನಲೈಕ್ ಯು ವುಡ್ ಅಂಡರ್‌ಸ್ಟ್ಯಾಂಡ್, ಎನಿವೇ ಸಂಕಲನದಲ್ಲಿನ ಕಥೆಗಳಲ್ಲೊಂದಾದಪ್ಲೆಷರ‍್ ಬೋಟಿಂಗ್ ಇನ್ ಲಿಥುಯಾ ಬೇ ನಲ್ಲಿ "ಬೃಹತ್ತಾದ" ಭೂಕಂಪವು ಅದಕ್ಕಿಂತ ಮತ್ತಷ್ಟು ವಿಧ್ವಂಸಕ ಸ್ವರೂಪದ ಸುನಾಮಿಗೆ ಮುನ್ನುಡಿ ಬರೆಯುತ್ತದೆ.
↑ತಲೇಬಿಯನ್, ಎಂ. ಜಾಕ್‌ಸನ್, ಜೆ. ೨೦೦೪. ಇರಾನಿನಝಾಗ್ರೋಸ್ ಪರ್ವತಗಳಲ್ಲಿನ ಭೂಕಂಪ ಕೇಂದ್ರಿತ ಕೌಶಲಗಳು ಹಾಗೂ ಸಕ್ರಿಯ ಚಿಕ್ಕದಾಗಿಸುವಿಕೆಯ ಒಂದು ಪುನರ್‌ಮೌಲ್ಯಮಾಪನ. ಜಿಯೋಫಿಸಿಕಲ್ ಜರ್ನಲ್ ಇಂಟರ್‌ನ್ಯಾಷನಲ್, ೧೫೬, ಪುಟಗಳು ೫೦೬-೫೨೬
↑Greene, H. W. (26 October 1989). "A new self-organizing mechanism for deep-focus earthquakes".Nature.341:733–737.doi:10.1038/341733a0.{{cite journal}}:Unknown parameter|coauthors= ignored (|author= suggested) (help)
↑Foxworthy and Hill (1982).Volcanic Eruptions of 1980 at Mount St. Helens, The First 100 Days: USGS Professional Paper 1249.
↑೨೮.೦೨೮.೧Noson, Qamar, and Thorsen (1988).Washington Division of Geology and Earth Resources Information Circular 85. Washington State Earthquake Hazards.{{cite book}}: CS1 maint: multiple names: authors list (link)
↑೩೪.೦೩೪.೧೩೪.೨೩೪.೩"Earthquakes".Encyclopedia of World Environmental History. Vol. 1. Encyclopedia of World Environmental History. 2003. pp. 358–364.{{cite encyclopedia}}:|access-date= requires|url= (help)
PetQuake.orgArchived 2017-12-24ವೇಬ್ಯಾಕ್ ಮೆಷಿನ್ ನಲ್ಲಿ.- ಭೂಕಂಪಗಳನ್ನು ಊಹಿಸಲು ಪ್ರಾಣಿಗಳ ವಿಚಿತ್ರವಾದ ಅಥವಾ ವಿಲಕ್ಷಣವಾದ ನಡವಳಿಕೆಯ ಮೇಲೆ ವಿಶ್ವಾಸವಿರಿಸುವ ಅಧಿಕೃತ PETSAAF ವ್ಯವಸ್ಥೆ