Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಧವಳಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧವಳಗಿರಿ ಪರ್ವತದ ಒಂದು ನೋಟ

ಧವಳಗಿರಿ ಪರ್ವತವು ೮೧೬೭ ಮೀ. ( ೨೬೭೯೫ ಅಡಿ) ಎತ್ತರವಿದ್ದು ವಿಶ್ವದ ೭ನೆಯ ಅತ್ಯುನ್ನತ ಶಿಖರವಾಗಿದೆ.ಹಿಮಾಲಯ ಪರ್ವತಶ್ರೇಣಿಯ ಉಪಸರಣಿಯಾದಧವಳಗಿರಿ ಹಿಮಾಲ್ ನ ಪೂರ್ವದಂಚಿನಲ್ಲಿನೇಪಾಳದ ಉತ್ತರಮಧ್ಯಭಾಗದಲ್ಲಿ ಈ ಪರ್ವತವಿದೆ.ಕಾಳಿ ಗಂಡಕಿಯ ಆಳವಾದಕೊಳ್ಳದ ಒಂದು ಮಗ್ಗುಲಲ್ಲಿರುವ ಧವಳಗಿರಿಯು ಕೊಳ್ಳದ ಇನ್ನೊಂದು ಮಗ್ಗುಲಲ್ಲಿರುವಅನ್ನಪೂರ್ಣಾ ಪರ್ವತಕ್ಕೆ ಹೊಂದಿರುವಂತೆ ಕಾಣುತ್ತದೆ. ಹೀಗೆ ೮೦೦೦ ಮೀ. ಗಳಿಗೂ ಎತ್ತರವಾಗಿರುವ ಎರಡು ಪರ್ವತಗಳು ಒಂದಕ್ಕೊಂದು ಅಂಟಿದಂತೆ ಕಾಣುವ ನೋಟ ಜಗತ್ತಿನಲ್ಲಿಯೇ ಅದ್ವಿತೀಯ ಮತ್ತು ಅದ್ಭುತ. ಧವಳಗಿರಿ ಎಂಬ ಹೆಸರಿನ ಅರ್ಥ ಶ್ವೇತಪರ್ವತ ಎಂಬುದಾಗಿದೆ.೧೮೦೮ರಲ್ಲಿ ಗುರುತಿಸಲ್ಪಟ್ಟ ಈ ಶಿಖರವು ಬಹುಕಾಲದವರೆಗೆ ಜಗತ್ತಿನ ಅತಿ ಎತ್ತರದ ಶಿಖರವೆಂದು ನಂಬಲಾಗಿತ್ತು. ಕಾಳಿ ಗಂಡಕಿ ಕೊಳ್ಳದಿಂದ ಹಠಾತ್ತಾಗಿ ಮೇಲೆದ್ದು ನಿಂತಿರುವಂತೆ ಕಾಣುವ ಧವಳಗಿರಿಯ ಮೈ ಬಲು ಕಡಿದಾಗಿದ್ದು ಹಲವು ಕಡೆ ಅತಿ ತೀವ್ರ ಇಳಿಜಾರು ಹೊಂದಿದೆ. ೧೯೬೦ರ ಮೇ ೧೩ರಂದುಸ್ವಿಸ್-ಆಸ್ಟ್ರಿಯಾ ಪರ್ವತಾರೋಹಿ ತಂಡದ ೬ ಮಂದಿ ಈ ಶಿಖರವನ್ನು ಮೊಟ್ಟಮೊದಲ ಬಾರಿಗೆ ತಲುಪುವಲ್ಲಿ ಯಶಸ್ವಿಯಾದರು.

ಪರ್ವತದ ಇನ್ನೊಂದು ನೋಟ

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಧವಳಗಿರಿ&oldid=1312028" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2025 Movatter.jp