ದಶಾವತಾರ ಜಾಗತಿಕ ಸಂರಕ್ಷಣೆಯ ಹಿಂದೂ ದೇವರಾದವಿಷ್ಣುವಿನ ಹತ್ತುಅವತಾರಗಳನ್ನು ಸೂಚಿಸುತ್ತದೆ. ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ.
ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳುವಿಷ್ಣುವಿಗೇ ಮೀಸಲಾದವಲ್ಲ.ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದುವಾಯು ಪುರಾಣ ಹೇಳುತ್ತದೆ.
ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದಕುಮಾರಿಲ ಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ.
೧ -ಮತ್ಸ್ಯ, ಎಂದರೆ ಮೀನು. ತರ್ಪಣ (ನೀರು ಅರ್ಪಣೆ) ಮಾಡುವಾಗ ರಾಜ ವೈವಸ್ವತ (ಮನು) ತನ್ನ ಅಂಗೈಯಲ್ಲಿ ಒಂದು ಮೀನು ಕಾಣುತ್ತಾನೆ. ಮನು ಮೀನನ್ನು ತೆಗೆದುಕೊಂಡು ಅರಮನೆಗೆ ಹೋಗುತ್ತಾನೆ.ಅದನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿದಾಗ ಅದು ಬೆಳೆಯುತ್ತಲೇ ಇರುತ್ತದೆ, ಅಂತಿಮವಾಗಿ ಅದನ್ನುವಿಷ್ಣು ಎಂದು ಅರಿತುಕೊಂಡು ಸಾಗರಕ್ಕೆ ಬಿಡುತ್ತಾನೆ. ವಿಷ್ಣು ಮುಂಬರುವ ಪ್ರಪಂಚದ ವಿನಾಶದ ಬಗ್ಗೆ ಬೆಂಕಿ ಮತ್ತು ಪ್ರವಾಹದ ಮೂಲಕ ತಿಳಿಸುತ್ತಾನೆ ಮತ್ತು ಮನುವನ್ನು "ವಿಶ್ವದ ಎಲ್ಲಾ ಜೀವಿಗಳನ್ನು" ಸಂಗ್ರಹಿಸಿ ದೇವರುಗಳು ನಿರ್ಮಿಸಿದ ದೋಣಿಯಲ್ಲಿ ಸುರಕ್ಷಿತವಾಗಿಡಲು ನಿರ್ದೇಶಿಸುತ್ತಾನೆ. ಪ್ರವಾಹ (ಪ್ರಳಯ) ಬಂದಾಗ, ವಿಷ್ಣು ಕೊಂಬಿನೊಂದಿಗೆ ದೊಡ್ಡ ಮೀನಿನಂತೆ ಕಾಣಿಸಿಕೊಳ್ಳುತ್ತಾನೆ, ಅದಕ್ಕೆ ಮನು ದೋಣಿಯನ್ನು ಕಟ್ಟುತ್ತಾನೆ. ಅದು ಅವರನ್ನು ಸುರಕ್ಷತೆಗೆ ಕರೆದೊಯ್ಯುತ್ತದೆ.
1 "Buddha or Balarama is considered the avatar of Vishnu, depending on the tradition. In North India, Buddha is included and in South India, Balarama as Avatar only by Chitanya cult."