ಟ್ರಾಯ್ಏಷ್ಯ ಮೈನರಿನವಾಯುವ್ಯದಲ್ಲಿ, ಡಾರ್ಡೆನಲ್ಸ್‍ಗೆ ದಕ್ಷಿಣದಲ್ಲಿ, ಟ್ರೋವಾಸ್ ಅಥವಾ ಟ್ರೋವಾಡ್ ಪ್ರದೇಶದಲ್ಲಿದ್ದ ಪ್ರಾಚೀನನಗರ. ಈ ಪುರಾತನ ನಗರದ ನೆಲೆ ಈಗಿನ ತುರ್ಕಿಯ ವಾಯುವ್ಯದಲ್ಲಿ ಮೆಂಡರೆಸ್ ನದಿಯ ದಡದಲ್ಲಿರುವ ಹಿಸರ್ಲಿಕ್‍ನಲ್ಲಿದೆ. ಶಿಲಾಯುಗದಿಂದ ರೋಮನ್ ಕಾಲದ ವರೆಗೆ ಅನುಕ್ರಮವಾಗಿ ಈ ನಿವೇಶನದಲ್ಲಿ ಒಂಬತ್ತು ನಗರಗಳು ನಿರ್ಮಿತವಾದುವೆಂದೂ. ಪ್ರತಿಯೊಂದು ಸಾರಿಯೂ ಹಿಂದಿನ ನಗರದ ಪಾಳಿನ ಮೇಲೆ ಹೊಸ ನಗರ ನಿರ್ಮಿತವಾಗುತ್ತಿತ್ತೆಂದೂ ಹೇಳಲಾಗಿದೆ.ಹೋಮರ್ ಕವಿ ರಚಿಸಿದ್ದೆನ್ನಲಾದಇಲಿಯಡ್ ಮತ್ತುಆಡಿಸ್ಸಿಮಹಾಕಾವ್ಯಗಳಲ್ಲೂ ವರ್ಜಿಲನ ಇನೀಯಿಡ್‍ನಲ್ಲೂ ಇದು ಅಮರವಾಗಿದೆ. ಹತ್ತು ವರ್ಷಗಳ ಟ್ರೋಜನ್ ಯುದ್ಧದಲ್ಲಿ ಸಂಘಟಿತ ಗ್ರೀಕ್ ಸೇನೆಗಳು ಟ್ರಾಯ್ ನಗರಕ್ಕೆ ಮುತ್ತಿಗೆ ಹಾಕಿ ಇದನ್ನು ವಶಪಡಿಸಿಕೊಂಡು ನಾಶಪಡಿಸಿದುವೆಂದು ಗ್ರೀಕ್ ಆಖ್ಯಾಯಿಕೆಯಿದೆ. ಮಧ್ಯಯುಗದ ರಮ್ಯ ಕಾವ್ಯಗಳಲ್ಲೂ ಇದರ ಉಲ್ಲೇಖವುಂಟು. ಇಲೀಯಮ್, ಟ್ರಾಯ್, ಟ್ರೋಯ, ಟ್ರೋಜ, ಇಲೀಯನ್ ಎಂಬವೂ ಇದರ ಹೆಸರುಗಳು. ನಾಲ್ಕು ತಲೆಮಾರುಗಳ ಅನಂತರ ಈ ನಗರದ ದುರ್ಗಮವಾದ ಕೋಟೆಯ ಗೋಡೆಗಳನ್ನು ಅಪಾಲೋ ಮತ್ತು ಪೊಸೈಡಾನರು ನಿರ್ಮಿಸಿದರು. ಅನಂತರದ ಹಾಗೂ ಕೊನೆಯ ದೊರೆ ಪ್ರೈಯಮ್.[೧] ಅವನ ಮಗ ಪ್ಯಾರಿಸ್. ಟ್ರೋಜನ್ ಯುದ್ಧಕ್ಕೆ ಇದು ಕಿಡಿ ಹಚ್ಚಿತು. ಟ್ರಾಯ್ ನಾಶವಾಯಿತು. ಕ್ರಿ. ಪೂ. ೧೧೮೪ರಲ್ಲಿ ಈ ಘಟನೆ ಸಂಭವಿಸಿತೆಂಬುದು ಐತಿಹ್ಯ.
ಟ್ರಾಯ್ ನಗರ ಇತ್ತೆಂಬುದು ಕೇವಲ ಊಹೆಯೆಂದೇ ಇತಿಹಾಸಕಾರರೂ ಭಾಷಾಶಾಸ್ತ್ರಜ್ಞರೂ ನಂಬಿದ್ದರು.[೨] ಆದರೆ 1871-1890ರಲ್ಲಿ ಜರ್ಮನ್ ಪುರಾತತ್ವಜ್ಞ ಹೈನ್ರಿಕ್ ಷ್ಲೀಮಾನ್ (1822-1890) ಎಂಬುವನು ಹಿಸರ್ಲಿಕ್‍ನ ಬೆಟ್ಟದ ಮೇಲೆ ವ್ಯಾಪಕವಾದ ಪಾಳುಗಳನ್ನು ಪತ್ತೆ ಹಚ್ಚಿದ. ಈ ಸ್ಥಳವೇ ಪುರಾತನ ಟ್ರಾಯ್ ನಗರದ ನೆಲೆಯೆಂಬುದರಲ್ಲಿ ಅವನಿಗೆ ಸಂಶಯವೇ ಇರಲಿಲ್ಲ. ಅವನು ಅನುಕ್ರಮವಾಗಿ ಮೂರು ಬಾರಿ ಉತ್ಖನನ ನಡೆಸಿ, ಅಲ್ಲಿ ಒಂದಾದಮೇಲೊಂದರಂತೆ ಅಸ್ತಿತ್ವದಲ್ಲಿದ್ದ ಒಂಬತ್ತು ನಗರಗಳ ಅವಶೇಷಗಳನ್ನು ಗುರುತಿಸಿದ. ಅನಂತರ 1893-94ರಲ್ಲಿ ಫ್ರೀಡ್ರಿಕ್ ವಿಲ್‍ಹೆಲ್ಮ್ ಡರ್ಪ್‍ಫೆಲ್ಟನೂ 1932-38ರಲ್ಲಿ ಅಮೆರಿಕನ್ ಪುರಾತತ್ವಜ್ಞ ಕಾರ್ಲ್ ವಿಲಿಯಮ್ ಬ್ಲೆಗೆನನೂಉತ್ಖನನ ಕಾರ್ಯವನ್ನು ಮುಂದುವರಿಸಿದರು. ಷ್ಲೀಮಾನ್ ಪತ್ತೆ ಹಚ್ಚಿದ ವಿವಿಧ ಸ್ತರಗಳ ಕಾಲಾನುಕ್ರಮಣಿಕೆಯನ್ನು ನೇರ್ಪುಗೊಳಿಸುವುದು ಇದರಿಂದ ಸಾಧ್ಯವಾಯಿತು. ಒಟ್ಟಿನಲ್ಲಿ 8000-ಕ್ರಿ. ಶ. 400ರ ಅವಧಿಯ ಸ್ಥೂಲ ಚಿತ್ರವೊಂದನ್ನು ಇವುಗಳಿಂದ ಪಡೆಯಬಹುದಾಗಿದೆ.[೩][೪]
ಈ ಹಂತಗಳಲ್ಲಿ ಅತ್ಯಂತ ಕೆಳಗಿನದು ಕಂಚಿನ ಯುಗದ ಆರಂಭ ಕಾಲಕ್ಕೆ ಸಮಬಂಧಿಸಿದ್ದು. ಸು.11/4 ಎಕರೆ ಪ್ರದೇಶದಲ್ಲಿದ್ದ ಈ ಪಟ್ಟಣದ ನಡುವೆ ಸಣ್ಣ ಅರಮನೆಯೊಂದಿತ್ತು. ಇದರ ಸುತ್ತ ಭದ್ರವಾದ ಗೋಡೆ ಇತ್ತು. ಇಲ್ಲಿದ್ದ ಮನೆಗಳನ್ನು ಕಲ್ಲಿನ ತಳಹದಿಗಳ ಮೇಲೆ ಒರಟು ಇಟ್ಟಿಗೆಗಳಿಂದ ಕಟ್ಟಲಾಗಿತ್ತು. ಇದರ ಕಾಲ ಕ್ರಿ. ಪೂ. ಸು. 3000. ಎರಡನೆಯ ಹಂತದ ಪಟ್ಟಣ ಕ್ರಿ. ಪೂ. ಸು. 2400ರಷ್ಟು ಹಿಂದಿನದು. ಮೊದಲನೆಯದಕ್ಕಿಂತ ಇದು ದೊಡ್ಡದಾಗಿತ್ತು. ಇಲ್ಲಿದ್ದ ಜನರು ಸಮುದ್ರ ವ್ಯಾಪಾರದಿಂದ ಹೆಚ್ಚು ಐಶ್ವರ್ಯ ಶೇಖರಿಸಿದ್ದರು. ಇದೇ ಪ್ರೈಯಮನ ಕಾಲದಲ್ಲಿದ್ದ ಟ್ರಾಯ್ ಎಂಬುದಾಗಿ ಷ್ಲೀಮಾನನ ಭಾವನೆ. ಇದರಲ್ಲಿದ್ದ ಉಗ್ರಾಣವನ್ನು ಪ್ರೈಯಮನಖಜಾನೆಯೆಂದು ಷ್ಲೀಮಾನ್ ನಂಬಿದ್ದ. ಇದರಲ್ಲಿಒಡವೆ,ಚಿನ್ನ,ಬೆಳ್ಳಿ, ಮುಂತಾದ ಅಮೂಲ್ಯ ವಸ್ತುಗಳು ಷ್ಲೀಮಾನನಿಗೆ ದೊರಕಿದ್ದುವು.ಮಡಿಕೆಯನ್ನು ಮಾಡುವುದರಲ್ಲಿ ವಿಶಿಷ್ಟವಾದ ಶೈಲಿಯೊಂದು ಆ ವೇಳೆಗೆ ಬೆಳೆದಿತ್ತಾದರೂಕುಂಬಾರ ಚಕ್ರದ ಬಳಕೆ ಇನ್ನೂ ಗೊತ್ತಿದ್ದಂತಿಲ್ಲ. ಈ ಪಟ್ಟಣ ಅಗ್ನಿಗೆ ಆಹುತಿಯಾಯಿತು. ಆದ್ದರಿಂದಲೇ ಷ್ಲೀಮಾನ್ ಇದನ್ನು ಪ್ರೈಯಮನ ಟ್ರಾಯ್ ಎಂದು ತಪ್ಪಾಗಿ ಭಾವಿಸಿದ. ಅವನು ಸಾಯುವ ಮುನ್ನ ಅವನೂ ಡರ್ಪ್‍ಫೆಲ್ಟನೂ ಈ ಭಾವನೆ ತಪ್ಪೆಂದು ಅರಿತುಕೊಂಡರು. 3, 4 ಮತ್ತು 5ನೆಯ ಟ್ರಾಯ್‍ಗಳು ಕ್ರಿ. ಪೂ. 1800ರ ವರೆಗೆ ಸಂಸ್ಕೃತಿಯ ಮುಂದುವರಿಕೆಯನ್ನು ಸೂಚಿಸುತ್ತವೆ. ಇವು ಹಿಂದಿನದಕ್ಕಿಂತ ಚಿಕ್ಕವು. ಈ ಕಾಲದಲ್ಲಿ ಹೊಸದಾಗಿ ಹೊಸದಾಗಿ ಹೆಚ್ಚಾಗಿ ಏನನ್ನೂ ಕಂಡುಹಿಡಿದಂತಿಲ್ಲ. ಬಣ್ಣ ಹಚ್ಚಿದ ಮಣ್ಣಿನ ಪಾತ್ರೆಗಳು ಮಾತ್ರವೇ ಹೊಸವು.[೫]
ಆರನೇಯ ಟ್ರಾಯ್‍ನ ಕಾಲ ಕ್ರಿ. ಪೂ. ಸು. 1800-1300. ಇದರ ಕೋಟೆ ಗೊಡೆಗಳು 15 ಗಿಂತ ಎತ್ತರವಾಗಿದ್ದುವು. ಅಲ್ಲಲ್ಲಿ ರಕ್ಷಣಾಗೋಪುರಗಳೂ ಮೂರು ಹೆಬ್ಬಾಗಿಲುಗಳೂ ಇದ್ದುವು. ಕೋಟೆಯ ನಡುವೆ ಕಟ್ಟಲಾಗಿದ್ದಕಟ್ಟಡಗಳು ಮೆಗರಾನ್ ಶೈಲಿಯವು. ಇಂಡೋ-ಯೂರೋಪಿಯನ್ ಭಾಷೆ ಆಡುತ್ತಿದ್ದ ಹೊಸ ಜನ ಈಸಂಸ್ಕೃತಿಗೆ ಕಾರಣರೆಂದು ಹೇಳಬಹುದು. ಈ ಕಾಲದಲ್ಲಿ ಮೈಸೀನೀಯನ್ ಸಂಪರ್ಕ ಬೆಳೆಯುತ್ತಿತ್ತು. ಭೂಕಂಪದಿಂದ ಈ ಪಟ್ಟಣ ನಾಶವಾಯಿತು. ಇದನ್ನು ಮತ್ತೆ ಸಣ್ಣದಾಗಿ ನಿರ್ಮಿಸಲಾಯಿತು. ಗ್ರೀಕರು ಟ್ರಾಯ್ ನಗರವನ್ನು ಗೆದ್ದು ನಾಶಪಡಿಸಿದರೆಂಬ ಕಥೆ ನಿಜವಾಗಿದ್ದಿದ್ದರೆ ಬಹುಶಃ ಇದೇ ಆ ಟ್ರಾಯ್ ಆಗಿರಬೇಕು. ಇದುಅಗ್ನಿಗೆ ಆಹುತಿಯಾದ ಗುರುತುಗಳಿವೆ. ಕ್ರಿ. ಪೂ. 1200ರ ವೇಳೆಗೆ ಇದು ಗಮನಾರ್ಹವಾಗಿ ನಾಗರಿಕತೆ ಮತ್ತು ಅಭಿವೃದ್ಧಿಯ ಮಟ್ಟ ಮುಟ್ಟಿತ್ತೆಂಬುದು ಖಂಡಿತ. ಆದರೆ ಈ ನಗರ ಹೋಮರನಿಂದ ವರ್ಣಿತವಾಗಿರುವಷ್ಟು ವಿಶಾಲವಾಗಿರಲಿಲ್ಲ. ಇದರಸೈನಿಕ ಶಕ್ತಿಯೂ ವಾಣಿಜ್ಯವೂ ಬೆಳೆದಿದ್ದುವು. ಮೈಸೀನೀಯನ್ ಗ್ರೀಸಿನೊಂದಿಗೆ ಇದು ನಿಕಟ ಸಂಪರ್ಕ ಹೊಂದಿತ್ತು. ಕ್ರಿ. ಪೂ. 13ನೆಯ ಶತಮಾನದಿಂದ ಇಲ್ಲಿ ಮೈಸೀನೀಯನ್ ಮೃತ್ಪಾತ್ರೆಗಳು ಇದ್ದುವು. ಇವುಗಳ ನಡುವಣ ವಾಣಿಜ್ಯಕ ಸ್ಪರ್ಧೆಯೇ ಹತ್ತು ವರ್ಷಗಳ ಯುದ್ಧಕ್ಕೂ ಕೊನೆಯಲ್ಲಿ ಟ್ರಾಯ್ ನಾಶವಾದ್ದಕ್ಕೂ ಕಾರಣವಾಗಿದ್ದಿರಬಹುದು.[೬][೭]
ಮುಂದಿನ ಶತಮಾನಗಳಲ್ಲಿ ತ್ರೇಸಿನ ಬರ್ಬರರೂ ಅನಂತರ ಇಯೋಲಿಯನರೂ ಇದರ ಮೇಲೆ ಆಕ್ರಮಣ ನಡೆಸಿದರು. ಕ್ರಿ. ಪೂ. 700ರಲ್ಲಿ ಗ್ರೀಕರು ಇಲ್ಲಿ ನೆಲೆಸಿದರು. 8ನೆಯ ನಗರ ಗ್ರೀಕ್ ಟ್ರಾಯ್. ಅನಂತರ ಗ್ರೀಕ್ ಮೂಲದವರ (ಹೆಲೆನಿಸ್ಟಿಕ್) ಮತ್ತು ರೋಮನರ ವಸತಿಗಳು ಬೆಳೆದುವು. 5ನೆಯ ಶತಮಾನದಲ್ಲಿ ಫ್ರೀಜಿಯದ ಪರ್ಷಿಯನ್ ಸತ್ರಪಿಯಲ್ಲಿ ಇದನ್ನು ಸೇರಿಸಲಾಗಿತ್ತು. 9ನೆಯ ಟ್ರಾಯನ್ನು ಗ್ರೀಕ್ ಸೇನಾಪತಿ ಹಾಗೂ ತ್ರೇಸಿನ ದೊರೆ (ಕ್ರಿ. ಪೂ. 306) ಲೈಸಿಮಕಸ್ ವಿಸ್ತರಿಸಿದ. ಆದರೆ ರೋಮನ್ ಅಂತರ್ಯುದ್ಧಗಳಲ್ಲಿ ಇದು ನಾಶವಾಯಿತು. ಇದನ್ನು ಅನಂತರ ರೋಮನ್ ಸರ್ವಾಧಿಕಾರಿ ಲೂಸಿಯಸ್ ಕಾರ್ನಿಲೀಯಸ್ ಸುಲ್ಲ (ಕ್ರಿ.ಪೂ.138-78) ಪುನರ್ನಿರ್ಮಿಸಿದ. ಅನೇಕ ರೋಮನ್ ಚಕ್ರವರ್ತಿಗಳು ಇದರಲ್ಲಿ ಅಭಿಮಾನ ತಳೆದಿದ್ದರು. ರೋಮಿನಿಂದ ಟ್ರಾಯ್‍ಗೆ ರಾಜಧಾನಿಯನ್ನು ಬದಲಾಯಿಸಲು ಜೂಲಿಯಸ್ ಸೀಸರ್ ಯೋಚಿಸಿದ್ದನೆಂದು ಹೇಳಲಾಗಿದೆ. ಟ್ರಾಯ್‍ಗೆ ಬಗ್ಗೆ ಕ್ರಿ. ಶ. 350ರಿಂದ ಈಚೆಗೆ ದಾಖಲೆಗಳಿಲ್ಲ.
↑Contributor 2017-08-26T02:46:00Z, Owen Jarus-Live Science."Ancient Troy: The City & the Legend".livescience.com. Retrieved11 January 2020.{{cite news}}:|last1= has generic name (help);Cite has empty unknown parameter:|1= (help)CS1 maint: numeric names: authors list (link)
↑"troy".Timeless Myths. Archived fromthe original on 11 ಜನವರಿ 2020. Retrieved11 January 2020.
↑Society, National Geographic (11 April 2014)."Fall of Troy".National Geographic Society. Archived fromthe original on 17 ಡಿಸೆಂಬರ್ 2019. Retrieved11 January 2020.{{cite news}}:Cite has empty unknown parameter:|8= (help)