ಕಣ್ಣೀರು ಕಣ್ಣಿನ ಸ್ರವಿಸುವಿಕೆ, ಮತ್ತು ಹಲವುವೇಳೆ ಕಣ್ಣುಗಳ ಕೆರಳಿಕೆಗೆ ಪ್ರತಿಕ್ರಿಯೆಯಾಗಿಕಣ್ಣುಗಳನ್ನು ಸ್ವಚ್ಛಗೊಳಿಸುವ ಹಾಗೂ ಜಾರುವಂತೆಮಾಡುವ ಕಾರ್ಯನಿರ್ವಹಿಸುತ್ತದೆ.[೧]ಅಳುವಿಕೆ ಮೂಲಕ ರೂಪಗೊಂಡ ಕಣ್ಣೀರುದುಃಖ,ಸುಖ,ಪ್ರೀತಿ, ಬೆರಗು ಮತ್ತುಸಂತೋಷದಂತಹ ಪ್ರಬಲ ಆಂತರಿಕಭಾವನೆಗಳಿಗೆ ಸಂಬಂಧಿಸಿದೆ.ನಗು ಅಥವಾ ಆಕಳಿಕೆಯೂ ಕಣ್ಣೀರಿನ ಉತ್ಪತ್ತಿಗೆ ಕಾರಣವಾಗಬಲ್ಲದು.
ಆರೋಗ್ಯವಂತಸಸ್ತನಿಗಳ ಕಣ್ಣುಗಳಲ್ಲಿ, ಕಾರ್ನಿಯಾವನ್ನು ಕಣ್ಣೀರು ನಿರಂತರವಾಗಿ ಒದ್ದೆಯಾಗಿಟ್ಟು ಪೋಷಿಸುತ್ತದೆ. ಕಣ್ಣೀರು ಕಣ್ಣನ್ನು ನಯವಾಗಿಸಿ ಧೂಳಿನಿಂದ ಮುಕ್ತವಾಗಿಡಲು ನೆರವಾಗುತ್ತದೆ. ಕಣ್ಣೀರಿನ ದ್ರವ ನೀರು, ಮ್ಯೂಸಿನ್, ಲಿಪಿಡ್‍ಗಳು, ಲೈಸೊಜ಼ೈಮ್, ಲ್ಯಾಕ್ಟೊಫ಼ೆರಿನ್, ಲಿಪೊಕ್ಯಾಲಿನ್, ಲ್ಯಾಕ್ರಿಟಿನ್, ಗ್ಲೂಕೋಸ್, ಯೂರಿಯಾ, ಸೋಡಿಯಮ್ ಮತ್ತು ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ. ಈ ದ್ರವದಲ್ಲಿನ ಕೆಲವು ವಸ್ತುಗಳು ರೋಗನಿರೋಧಕ ವ್ಯವಸ್ಥೆಯ ಭಾಗವಾಗಿ ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುತ್ತವೆ. ಇದನ್ನು ಲೈಸೊಜ಼ೈಮ್ ಕೆಲವು ಬ್ಯಾಕ್ಟೀರಿಯಾವನ್ನು ಹೊಂದಿದ, ಪೆಪ್ಟಿಡೊಗ್ಲೈಕಾನ್ ಎಂದು ಕರೆಯಲ್ಪಡುವ ಹೊರಗಿನ ಲೇಪನದ ಒಂದು ಪದರವನ್ನು ಕರಗಿಸಿ ಮಾಡುತ್ತದೆ. ಸಾಮಾನ್ಯವಾಗಿ, ೨೪ ಗಂಟೆಗಳ ಅವಧಿಯಲ್ಲಿ, ೦.೭೫ ರಿಂದ ೧.೧ ಗ್ರಾಂ ಕಣ್ಣೀರು ಸ್ರವಿಕೆಯಾಗುತ್ತದೆ; ಈ ಪ್ರಮಾಣ ವಯಸ್ಸಾದಂತೆ ಕಡಿಮೆಯಾಗುತ್ತದೆ.
ನಿರಿಚ್ಛಾ ಕಣ್ಣೀರು ಹೊರಗಿನ ಕಣಗಳಿಂದ ಕಣ್ಣಿನ ಕೆರಳಿಕೆಯಿಂದ, ಅಥವಾಈರುಳ್ಳಿ ಬಾಷ್ಪ, ಸುಗಂಧದ್ರವ್ಯಗಳು,ಅಶ್ರುವಾಯು, ಮೆಣಸು ಸೀರ್ಪನಿಯಂತಹ ಉದ್ರೇಕಕಾರಿ ವಸ್ತುಗಳ ಉಪಸ್ಥಿತಿಯಿಂದ ಉಂಟಾಗುತ್ತದೆ. ಈ ವಸ್ತುಗಳು ಕಣ್ಣಿನ ಪರಿಸರದಲ್ಲಿ ಸೇರಿದಾಗ ಕಣ್ಣೀರು ಬರುತ್ತದೆ. ಪ್ರಕಾಶಮಾನ ಬೆಳಕು ಮತ್ತು ನಾಲಿಗೆ ಹಾಗೂ ಬಾಯಿಗೆ ಬಿಸಿ ಅಥವಾ ಖಾರದ ಪ್ರಚೋದನೆಯಿಂದಲೂ ಕಣ್ಣೀರು ಉಂಟಾಗುತ್ತದೆ. ಕಣ್ಣೀರು ವಾಂತಿ, ಕೆಮ್ಮು ಮತ್ತು ಆಕಳಿಕೆಗೂ ಸಂಬಂಧಿಸಿದೆ. ಕಣ್ಣಿನ ಸಂಪರ್ಕಕ್ಕೆ ಬಂದ ಉದ್ರೇಕಕಾರಿಗಳನ್ನು ತೊಳೆದುಹಾಕಲು ನಿರಿಚ್ಛಾ ಕಣ್ಣೀರು ಪ್ರಯತ್ನಿಸುತ್ತದೆ.
ಅಳುವುದರಿಂದಲೂ ಕಣ್ಣೀರು ಬರುತ್ತದೆ. ಪ್ರಬಲ ಭಾವನಾತ್ಮಕ ಒತ್ತಡ, ಸಂತೋಷ, ಕೋಪ, ನರಳಿಕೆ, ಶೋಕ ಅಥವಾ ದೈಹಿಕ ನೊವಿನಿಂದ ಅಳು ಬರುತ್ತದೆ. ಈ ಅಭ್ಯಾಸ ನಕಾರಾತ್ಮಕ ಭಾವನೆಗಳಿಗೆ ಸೀಮಿತವಾಗಿಲ್ಲ; ಅನೇಕ ಜನ ತೀವ್ರ ತಮಾಷೆ ಮತ್ತು ನಗುವಿನ ಅವಧಿಗಳಲ್ಲಿ ತುಂಬಾ ಸಂತೋಷಗೊಂಡಾಗ ಅಳುತ್ತಾರೆ.