Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಅಥೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Restoration of thepolychrome decoration of the Athena statue from theAphaea temple atAegina, c. 490 BC (from the exposition “Bunte Götter” by the MunichGlyptothek)

ಅಥೀನ ಸುಮಾರು 2,300 ವರ್ಷಗಳ ಹಿಂದೆ ಗ್ರೀಸಿನ ದೊರೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಪಾರ್ಥೆನಾನ್ ಎಂಬ ಸುಂದರ ಅಮೃತಶಿಲೆಯ ಮಂದಿರದೊಳಗಿದ್ದ ಸ್ತ್ರೀ ದೇವತಾಮೂರ್ತಿ. ಒಲಿಂಪಸ್ಸಿನ ಅನುಗ್ರಹ ತೋರುವ ಈ ದೇವತೆ ವಿವೇಕದ, ಶಾಂತಿ-ಸಮಾಧಾನಗಳ ದ್ಯೋತಕಿ. ಕಲಾಪೋಷಕಿ. ಬಿರುಗಾಳಿ ಮುಂತಾದವುಗಳ ಮೇಲೆ ಆಧಿಪತ್ಯ ನಡೆಸುವವಳು. ಅಥೆನ್ಸಿನ ಪೋಷಕಿಯಾಗಿರುವ ಈ ಕನ್ನಿಕಾದೇವತೆ ಜ್ಯೂಸನ ಹಣೆಯಿಂದ ಜನಿಸಿದವಳು. ಸಾಮಾನ್ಯವಾಗಿ ಈಕೆಯ ತಲೆಯ ಮೇಲೆ ಒಂದು ಶಿರಸ್ತ್ರಾಣವಿದ್ದು ಮೆಡೂಸನ್ ತಲೆಯಿರುವ ಒಂದು ಗುರಾಣಿಯನ್ನು ಹಿಡಿದಿರುತ್ತಾಳೆ. ಈ ದೇವತೆಗೆ ಸಂಬಂಧಿಸಿದಂತೆ ಪ್ಯಾನೆಥೀನಿಯ ಎಂಬ ಹಬ್ಬವೂ ಜರುಗುತ್ತದೆ. ರೋಮನ್ನರ ಪ್ರಜ್ಞಾದೇವತೆಮಿನರ್ವಳ ಜೊತೆ ಈಕೆಯನ್ನೂ ಪೂಜಿಸುತ್ತಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Wikimedia Commons has media related toAthena.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಥೀನ&oldid=714038" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2025 Movatter.jp